Thursday, June 4, 2026
Homeಕರಾವಳಿಉಡುಪಿಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್;ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಗುರುರಾಜ್ ಘಂಟಿಹೊಳೆಗೆ ಟಿಕೆಟ್

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್;ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಗುರುರಾಜ್ ಘಂಟಿಹೊಳೆಗೆ ಟಿಕೆಟ್

- Advertisement -
- Advertisement -

ನವದೆಹಲಿ; ಮೊನ್ನೆ ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿತ್ತು. ನಿನ್ನೆ 23 ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್ ಮಾಡಲಾಗಿದೆ. ಅದರಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ. ಇನ್ನು 12 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿಯಿದೆ.

ಕರಾವಳಿಯಲ್ಲಿ ಬಾಕಿ ಉಳಿದಿದ್ದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು ಸಾಮಾನ್ಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಗುರುರಾಜ್ ಗೆ ಟಿಕೆಟ್ ನೀಡೋದರಿಂದ ಹಾಲಿ‌ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ಮಿಸ್ ಆಗಿದೆ.

ಇನ್ನು ಆರ್ ಆರ್ ಎಸ್ ಹಿನ್ನಲೆಯ ಗುರುರಾಜ್ ಗಂಟಿಹೊಳೆ, ಆರ್ ಎಸ್ ಎಸ್ ಪ್ರಚಾರಕರಾಗಿ ಪುತ್ತೂರು ಸುಳ್ಯದಲ್ಲಿ ಕೆಲಸ ಮಾಡಿದ್ದರು. ಅವರಿಗೆ ಟಿಕೆಟ್ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿದ್ದೆವೆ ಎಂಬ ಸಂದೇಶ ಬಿಜೆಪಿ ರವಾನಿಸಿದೆ.

- Advertisement -

Latest News

error: Content is protected !!