Thursday, June 4, 2026
Homeಕರಾವಳಿಕರ್ತವ್ಯದಲ್ಲಿರುವಾಗಲೇ ಕಡಬ ಮೂಲದ ಯೋಧ ಹೃದಯಾಘಾತವಾಗಿ ಹುತಾತ್ಮ

ಕರ್ತವ್ಯದಲ್ಲಿರುವಾಗಲೇ ಕಡಬ ಮೂಲದ ಯೋಧ ಹೃದಯಾಘಾತವಾಗಿ ಹುತಾತ್ಮ

- Advertisement -
- Advertisement -

ಕರ್ತವ್ಯದಲ್ಲಿರುವಾಗಲೇ ಕಡಬ ಮೂಲದ ಯೋಧ ಹೃದಯಾಘಾತವಾಗಿ ಹುತಾತ್ಮರಾಗಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗ ಲಿಜೇಶ್ ಕುರಿಯನ್ ಹುತಾತ್ಮ ಯೋಧ.

ಮಾ.26 ರಂದು ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತ ಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಹುತಾತ್ಮರಾಗಿದ್ದಾರೆ. ಇವರ ಪಾರ್ಥೀವ ಶರೀರ ಹುಟ್ಟೂರು ಕಡಬ ತಲುಪಲಿದೆ.

11-30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರಲಿದೆ” ಎಂದು ಧರ್ಮಗುರು ಜೋಸ್ ಆಯಂಕುಡಿ ತಿಳಿಸಿದ್ದಾರೆ. ಮೃತ ಲಿಜೇಶ್ ತಮ್ಮ ಪತ್ನಿ ಜೋಮಿತಾ, ಒಂದು ವರ್ಷದ ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!