Thursday, June 4, 2026
Homeಕರಾವಳಿಮಂಗಳೂರು: ಅಡ್ಯಾರ್ ಐಸ್ ಕ್ರೀಂ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಅವಘಡ: ಕೋಟ್ಯಂತರ ರೂಪಾಯಿ ನಷ್ಟ

ಮಂಗಳೂರು: ಅಡ್ಯಾರ್ ಐಸ್ ಕ್ರೀಂ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಅವಘಡ: ಕೋಟ್ಯಂತರ ರೂಪಾಯಿ ನಷ್ಟ

- Advertisement -
- Advertisement -

ಮಂಗಳೂರು ಹೊರವಲಯದಲ್ಲಿರುವ ಅಡ್ಯಾರ್ ನ ಪೋಲಾರ್ ಐಸ್ ಕ್ರೀಂ‌ ಸೂಪರ್ ಸ್ಟಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಮಳಿಗೆಯಲ್ಲಿ ಇಂದು (ಮಾ.28) ಮುಂಜಾನೆ ಎರಡು ಗಂಟೆಯ ಸುಮಾರಿಗೆ ಬೆಂಕಿ ತಗಲಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.

ಘಟನೆಯಲ್ಲಿ ವಾಹನ ಸೇರಿದಂತೆ ಸುಮಾರು 5 ಕೋ.ರೂ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.  ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿವೆ.

ಕಾರವಾರದಿಂದ ಕಾಸರಗೋಡಿನವರೆಗೆ ನಂದಿನಿ ಐಸ್ ಕ್ರ್ರೀಂ ವಿತರಿಸುವ ಕೇಂದ್ರ ಇದಾಗಿದೆ. ಈ ಕಟ್ಟಡದಲ್ಲಿ ನಂದಿನಿ ಐಸ್ ಕ್ರೀ‍ಮ್ ಪ್ರೊಡಕ್ಟ್‌ಗಳ ದಾಸ್ತಾನು ಇಡಲಾಗಿತ್ತು. ಇದರ ಜತೆಗೆ ಐಸ್ ಕ್ರಿಮ್ ತಯಾರಿಕಾ ಘಟಕಕ್ಕೂ ಬೆಂಕಿ ಹಬ್ಬಿದೆ.

ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಅಗ್ನಿ ದುರಂತದಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಹರ್ಷಮಣಿ ಎಸ್.ರೈ ಎಂಬವರಿಗೆ ಸೇರಿದ ದಾಸ್ತಾನು ಮಳಿಗೆ ಇದಾಗಿದೆ ಅಂತ ತಿಳಿದು ಬಂದಿದೆ.

- Advertisement -

Latest News

error: Content is protected !!