Wednesday, June 3, 2026
Homeಕರಾವಳಿಕಾಸರಗೋಡಿನಲ್ಲೊಂದು‌ ವಿಶೇಷ ಪ್ರಕರಣ; 56 ವರ್ಷದ ಆರೋಪಿಗೆ 62 ವರ್ಷ ಜೈಲು ಶಿಕ್ಷೆ

ಕಾಸರಗೋಡಿನಲ್ಲೊಂದು‌ ವಿಶೇಷ ಪ್ರಕರಣ; 56 ವರ್ಷದ ಆರೋಪಿಗೆ 62 ವರ್ಷ ಜೈಲು ಶಿಕ್ಷೆ

- Advertisement -
- Advertisement -

ಕಾಸರಗೋಡು; ನ್ಯಾಯಾಲಯವೊಂದು ವಿಶೇಷ ತೀರ್ಪು ನೀಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 56 ವರ್ಷದ ಆರೋಪಿಗೆ 62 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕುಂಬಳೆ ಬಂಬ್ರಾಣದ ಕೆ.ಚಂದ್ರಶೇಖರ (56) ಶಿಕ್ಷೆ ಗೊಳಗಾದ ಆರೋಪಿ.ಕಾಸರಗೋಡು ಮತ್ತು ಕುಂಬಳೆ ಠಾಣಾ ಪೊಲೀಸರು ದಾಖಲಿಸಿದ ಎರಡು ಪ್ರತ್ಯೇಕ ಫೋಕ್ಸೋ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಈ ಶಿಕ್ಷೆ ವಿಧಿಸಲಾಗಿದೆ

ಕಾಸರಗೋಡು ಹಾಗೂ ಕುಂಬಳೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲಾ 31 ವರ್ಷ ಶಿಕ್ಷೆ ವಿಧಿಸಲಾಗಿದೆ.ಇದರ ಜೊತೆಗೆ ಆರೋಪಿಗೆ ಒಂದು ಲಕ್ಷ ರೂ.ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.ಕಾಸರಗೋಡು ಫಾಸ್ಟ್ ಟ್ರಾಕ್ ವಿಶೇಷ ಪೋಕ್ಸೋ ನ್ಯಾಯಾಲಯ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

- Advertisement -

Latest News

error: Content is protected !!