Thursday, June 4, 2026
Homeಕರಾವಳಿಪುತ್ತೂರು: ಹಾವು ಕಡಿತಕ್ಕೊಳಗಾದ ತಾಯಿ: ಬಾಯಿಯಿಂದ ವಿಷವನ್ನು ಹೀರಿ ಜೀವ ಉಳಿಸಿದ ಮಗಳು

ಪುತ್ತೂರು: ಹಾವು ಕಡಿತಕ್ಕೊಳಗಾದ ತಾಯಿ: ಬಾಯಿಯಿಂದ ವಿಷವನ್ನು ಹೀರಿ ಜೀವ ಉಳಿಸಿದ ಮಗಳು

- Advertisement -
- Advertisement -

ಪುತ್ತೂರು: ಹಾವು ಕಡಿತಕ್ಕೊಳಗಾದ ತಾಯಿಗೆ ಮಗಳೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಘಟನೆ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.

ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಶ್ರಮ್ಯಾ ರೈ ಎಂಬಾಕೆಯೇ ತನ್ನ ತಾಯಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾಳೆ.  ತಾಯಿಗೆ ನಾಗರ ಹಾವು ಕಡಿದಿದ್ದು, ತಕ್ಷಣ ಮಗಳು ಬಾಯಿಯಿಂದ ವಿಷವನ್ನ ಹೀರಿ ಹೊರತೆಗೆದಿದ್ದಾಳೆ. ನಂತರ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಮಗಳ ಸಮಯಪ್ರಜ್ಞೆಯಿಂದ ತಾಯಿ ಜೀವ ಉಳಿದಿದ್ದು, ಸಾಹಸಿ ಮಗಳ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!