Saturday, June 6, 2026
Homeಕರಾವಳಿಬೆಳ್ತಂಗಡಿ; ಬಾವಿಗೆ ಬಿದ್ದ ಕೊಡ ಮೇಲೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿ ಸಾವು

ಬೆಳ್ತಂಗಡಿ; ಬಾವಿಗೆ ಬಿದ್ದ ಕೊಡ ಮೇಲೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ: ಬಾವಿಗೆ ಬಿದ್ದ ಕೊಡ ಮೇಲೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿ ಕೊಡ ಮೇಲೆತ್ತಿ ಬಾವಿಯಿಂದ ಮೇಲೆ ಬರುತ್ತಿದ್ದಂತೆ ಹಗ್ಗದಿಂದ ಕೈ ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಪ್ರವೀಣ್ ಮೃತ ದುರ್ದೈವಿ.

ಪ್ರವೀಣ್, ವಸಂತಿ ಎಂಬವರ ಮನೆ ಬಾವಿಗೆ ಬಿದ್ದಿದ್ದ ಕೊಡವನ್ನು ಮೇಲಕ್ಕೆತ್ತಲು ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದರು.ಬಳಿಕ ಕೊಡವನ್ನು ಮೇಲಕ್ಕೆ ಕಳುಹಿಸಿದ್ದರು.ಬಳಿಕ ಅದೇ ಹಗ್ಗವನ್ನು ಬಳಸಿಕೊಂಡು ಅವರು ಮೇಲೆ ಬರುವಾಗ ಕೈಜಾರಿ ಬಾವಿಗೆ ಬಿದ್ದಿದ್ದಾರೆ.ಬಳಿಕ ಅಗ್ನಿ ಶಾಮಕ ದಳದವರು ಬಂದು ಪ್ರವೀಣ್ ರವರನ್ನು ಮೇಲಕ್ಕೇತ್ತಿದ್ದಾರೆ.ಆದರೆ ಅಷ್ಟರಲ್ಲಿ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌.

- Advertisement -

Latest News

error: Content is protected !!