Saturday, June 6, 2026
Homeತಾಜಾ ಸುದ್ದಿಮನೆಯಲ್ಲಿದ್ದುಕೊಂಡೇ 1 ಕೋಟಿ ಗಳಿಸಿದ ಬಡ ಹುಡುಗ!ಹೇಗೆ ನೋಡಿ!

ಮನೆಯಲ್ಲಿದ್ದುಕೊಂಡೇ 1 ಕೋಟಿ ಗಳಿಸಿದ ಬಡ ಹುಡುಗ!ಹೇಗೆ ನೋಡಿ!

- Advertisement -
- Advertisement -

ಅನಿವಾರ್ಯವಾದ ಲಾಕ್ ಡೌನ್ ದೇಶದಲ್ಲಿ ಲಕ್ಷಾಂತರ ಜನರನ್ನು ಆರ್ಥಿಕ ನಷ್ಟಕ್ಕೆ ನೂಕಿದೆ ಆದರೆ ಈ ಹುಡುಗನಿಗೆ ಮಾತ್ರ ಅದೇ ಲಾಕ್ ಡೌನ್ ದೊಡ್ಡ ಅದೃಷ್ಟವನ್ನು ತಂದಿದೆ.ಈತನ ಹೆಸರು ಯುವರಾಜ್ ವಯಸ್ಸು 18 ವರ್ಷ .ರಾಜಸ್ಥಾನ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ ಹುಡುಗ ಈತನ ತಂದೆ ಟೈಲ್ ಫಿಕ್ಸ್ ಮಾಡುವ ದಿನಗೂಲಿ ನೌಕರ ಇವರು ಇಷ್ಟು ಬಡವರಾಗಿದ್ದರು ಅಂದ್ರೆ ಈ ಕಾಲದಲ್ಲೂ ಇವರ ಮನೆಯಲ್ಲಿ ಒಂದು ಮೊಬೈಲ್ ಕೂಡ ಇರಲಿಲ್ಲ ಆದರೆ ಒಂದು ದಿನ ಮೊಬೈಲ್ ಕೊಂಡುಕೊಳ್ಳೋಣ ಎಂದು ನಿರ್ಧರಿಸಿದ ಯುವರಾಜ್ ಹಾಗೂ ಆತನ ತಂಗಿ ಹಲವು ತಿಂಗಳು ಕಷ್ಟ ಪಟ್ಟು ಹಣ ಕೂಡಿಟ್ಟು ಕೊನೆಗೆ ಒಂದು ಫೋನನ್ನು ಖರೀದಿ ಮಾಡಿಯೇ ಬಿಟ್ಟರು.

ಮೊದಲ ಮೊಬೈಲ್ ಅವರಲ್ಲಿ ತುಂಬಾ ಸಂತಸ ಕೊಟ್ಟಿತ್ತು, ಬಿಡುವಿನ ಸಮಯದಲ್ಲಿ ಅಣ್ಣ ತಂಗಿ ಕೂತ್ಕೊಂಡು ಮೊಬೈಲ್ ನಲ್ಲಿ ತಮಾಷೆ ವಿಡಿಯೊಗಳು ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ನೋಡುತ್ತಿದ್ದರು.ಆ ಒಂದು ಒಳ್ಳೆಯ ದಿನ ಯುವರಾಜ್ ಜೀವನವನ್ನೇ ಬದಲಾಯಿಸಿ ಬಿಟ್ಟಿತು.ಎಂದಿನಂತೆ ಮೊಬೈಲ್ನಲ್ಲಿ ಹಾಡುಗಳನ್ನು ನೋಡುತ್ತಿದ್ದ ಯುವರಾಜ್ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುನ್ನ ಮೈಕಲ್ ಎನ್ನುವ ಸಿನಿಮಾದ ಹಾಡು ನೋಡಿದಅದರಲ್ಲಿ ಟೈಗರ್ ಶ್ರಾಫ್ ಹಾಕಿದ್ದ ಡ್ಯಾನ್ಸ್ ಸ್ಟೆಪ್ಸ್ ಯುವರಾಜ್ ಗೆ ತುಂಬಾ ಇಷ್ಟ ಆಯ್ತು .

ನಾನು ಹಾಗೆ ಡ್ಯಾನ್ಸ್ ಮಾಡಬೇಕು ಎಂದುಕೊಂಡ ಅದರಂತೆ ಮನೆಯಲ್ಲಿ ಡ್ಯಾನ್ಸ್ ಸ್ಟೆಪ್ಸ್ ಕಲಿಯಲು ಆರಂಭಿಸಿದ ಈತನ ಡ್ಯಾನ್ಸ್ ನೋಡಿ ಜನ ನಾಗಾಡುತ್ತಿದ್ದರೂ ಆದರೆ ಒಬ್ಬರು ಮಾತ್ರ ಈತನ ಡ್ಯಾನ್ಸನ್ನು ಪ್ರೋತ್ಸಾಹ ಮಾಡುತ್ತಿದ್ದರೂ ಅದು ಮತ್ತ್ಯಾರೂ ಅಲ್ಲ ಯುವರಾಜ್ ನ ತಂಗಿ .ಯಾರು ಕೊಡದ ಪ್ರೋತ್ಸಾಹ ತಂಗಿ ಕೊಡುತ್ತಿದ್ದಳು.ಅಷ್ಟು ಸಾಕು ತನ್ನ ತಂಗಿಯ ಪ್ರೋತ್ಸಾಹವನ್ನು ಎನರ್ಜಿಯನ್ನಾಗಿ ಮಾಡಿಕೊಂಡು ಸತತವಾಗಿ ಡ್ಯಾನ್ಸ್ ಮಾಡುತ್ತಿದ್ದ ಯುವರಾಜ್ ಕೊನೆಗೆ 6 ತಿಂಗಳ ನಂತರ ಅದರ ಲಯ ಕಂಡುಕೊಂಡ.

ಮೈಕಲ್ ಜಾಕ್ಸನ್ ರೀತಿ ಡಾನ್ಸ್ ಮಾಡುವುದನ್ನು ಕಲಿತೆ ಬಿಟ್ಟ.ತನ್ನ ಡ್ಯಾನ್ಸ್ ಅನ್ನು ವಿಡಿಯೋ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡಿದ ಯುವರಾಜ್ ಗೆ ಪ್ರಶಂಸೆ ಸಿಕ್ಕಿತು.ಜನ ಈತನನ್ನು ಬಾಬಾ ಜಾಕ್ಸನ್ ಎಂದು ಕರೆಯಲು ಆರಂಭಿಸಿದರು.
ಇದರ ಮಧ್ಯೆ ಲಾಕ್ ಡೌನ್ ಸಮಯದಲ್ಲಿ ಫ್ಲಿಪ್ ಕಾರ್ಟ್ ಕಂಪನಿ ಸ್ಟೇ ಹೋಮ್ ಎನ್ನುವ ಸ್ಪರ್ಧೆ ಎನ್ನುವ ಆಯೋಜಿಸಿತ್ತು.ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರತಿ ವಾರ 10 ಲಕ್ಷ , ಕೊನೆಯ ವಿಜೇತರಿಗೆ 1 ಕೋಟಿ ಬಹುಮಾನ ಘೋಷಿಸಿತ್ತು.

ಪ್ಲಿಪ್ ಕಾರ್ಟ್ ಆಯೋಜಿಸಿದ್ದ ಸ್ಟೇ ಹೋಂ ಸ್ಪರ್ಧೆಯಲ್ಲಿ ಯಾರು ಮನೆಯಲ್ಲಿದ್ದು ಚೆನ್ನಾಗಿ ಮನರಂಜನೆ ಕೊಡುತ್ತಾರೋ ಅವರಿಗೆ 1 ಕೋಟಿ ಗೆಲ್ಲುವ ಅವಕಾಶ ಇತ್ತು.ಇದರಲ್ಲಿ ಭಾಗವಹಿಸಿದ ಯುವರಾಜ್ ತಮ್ಮ ಡ್ಯಾನ್ಸ್ ಮೂಲಕ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದರು ಹಾಗೆ ಒಂದು ಕೋಟಿ ಗೆದ್ದುಕೊಂಡರು.

- Advertisement -

Latest News

error: Content is protected !!