Saturday, May 18, 2024
Homeತಾಜಾ ಸುದ್ದಿಲಡಾಖ್ ಗಡಿ ಘರ್ಷಣೆಯಲ್ಲಿ ಚೀನಾದ 40 ಯೋಧರು ಬಲಿಯಾಗಿದ್ದಾರೆ: ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್

ಲಡಾಖ್ ಗಡಿ ಘರ್ಷಣೆಯಲ್ಲಿ ಚೀನಾದ 40 ಯೋಧರು ಬಲಿಯಾಗಿದ್ದಾರೆ: ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್

spot_img
- Advertisement -
- Advertisement -

ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿನ ಗಲ್ವಾನ್ ಕಣಿವೆಯಲ್ಲಿ ಇತ್ತೀಚಿಗೆ ಚೀನಾ ಹಾಗೂ ಭಾರತೀಯ ಸೇನಾಪಡೆಗಳ ನಡುವಣ ಮುಖಾಮುಖಿ ಘರ್ಷಣೆಯಲ್ಲಿ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರೆ. ಚೀನಾ ದೇಶದವರಿಗೆ ಇದಕ್ಕಿಂತಲೂ ದುಪ್ಪಟು ಪ್ರಮಾಣದ ಸೈನಿಕರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಹಾಲಿ ಸರ್ಕಾರದ ಸಚಿವರು ಆಗಿರುವ ಜನರಲ್ ವಿಕೆ ಸಿಂಗ್ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ

ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 40 ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಮೊದಲಬಾರಿಗೆ ಚೀನಾ ದೇಶದ ಸಾವು- ನೋವುಗಳ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ.

.ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಪಿಎಲ್ ಎ ಸೈನಿಕರ ಸಾವಿನ ಬಗ್ಗೆ ಗೊಂದಲವಿದೆ. ಚೀನಾ ಸತ್ತವರ ಸಂಖ್ಯೆಯನ್ನು ಮುಚ್ಚಿಡುತ್ತಿದೆ. 1962ರ ಯುದ್ಧದ ಸಂದರ್ಭದಲ್ಲೂ ಇದೇ ರೀತಿ ಮಾಡಿತ್ತು. ಸಾವು ನೋವುಗಳನ್ನು ಅದು ಸ್ವೀಕರಿಸುವುದಿಲ್ಲ ಎಂದು ಜನರಲ್ ಸಿಂಗ್ ತಿಳಿಸಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆ ಹಾಗೂ ದೇಶದ ಗಡಿಯೊಳಗೆ ಚೀನಾ ಸೈನಿಕ ಪ್ರವೇಶದ ಬಗ್ಗೆ ಊಹಾಪೋಹಗಳು ಎದ್ದಿರುವಂತೆ , ಚೀನಾ ಸೇನಾ ನಮ್ಮ ಗಡಿಯೊಳಗೆ ಪ್ರವೇಶಿಸಿಲ್ಲ ಎಂದು ವಿಕೆ ಸಿಂಗ್ ಸ್ಪಷ್ಪಪಡಿಸಿದ್ದಾರೆ.

- Advertisement -
spot_img

Latest News

error: Content is protected !!