Saturday, June 6, 2026
Homeಕ್ರೀಡೆಕ್ರಿಕೆಟಿಗ ಸೌರವ್ ಗಂಗೂಲಿ ಮನೆಗೂ ತಲುಪಿದ 'ಕೊರೊನಾ' ಸೋಂಕು..

ಕ್ರಿಕೆಟಿಗ ಸೌರವ್ ಗಂಗೂಲಿ ಮನೆಗೂ ತಲುಪಿದ 'ಕೊರೊನಾ' ಸೋಂಕು..

- Advertisement -
- Advertisement -

ಕೊಲ್ಕೊತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಸೌರವ್ ಗಂಗೂಲಿ ಅಣ್ಣ ಸ್ನೇಹಸಿಶ್ ಗಂಗೂಲಿ ಪತ್ನಿ ಹಾಗೂ ಅತ್ತೆ, ಮಾವಗೆ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಗಂಗೂಲಿ ಅಣ್ಣ ಸ್ನೇಹಸೀಶ್ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಅವರಿಗೆ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಕೊರೊನಾ ಪಾಸಿಟಿವ್ ಬಂದ ಎಲ್ಲರೂ ಸೌರವ್ ಅವರ ವಂಶಸ್ಥರು ವಾಸಿಸುತ್ತಿರುವ ಬೆಹಲಾ ನಿವಾಸದಲ್ಲಿ ಇರಲಿಲ್ಲ. ಬೇರೊಂದು ಮನೆಯಲ್ಲಿ ವಾಸವಿದ್ದ ವೇಳೆ ಕೊರೊನಾ ಸೋಂಕು ಹರಡಿದೆ. ಆದರೆ, ಸೌರವ್ ಗಂಗೂಲಿಗೂ, ಇವರಿಗೂ ಯಾವುದೇ ಸಂಪರ್ಕ ಇರಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

- Advertisement -

Latest News

error: Content is protected !!