Saturday, June 6, 2026
Homeತಾಜಾ ಸುದ್ದಿರಸ್ತೆಯ ಡಿವೈಡರ್'ಗೆ ಗುದ್ದಿದ ಕಾರು: ಒಂದೇ ಕುಟುಂಬದ ಐವರು ದಾರುಣ ಸಾವು

ರಸ್ತೆಯ ಡಿವೈಡರ್’ಗೆ ಗುದ್ದಿದ ಕಾರು: ಒಂದೇ ಕುಟುಂಬದ ಐವರು ದಾರುಣ ಸಾವು

- Advertisement -
- Advertisement -

ದೆಹಲಿ: ಸೂರ್ಯಗ್ರಹಣದ ದಿನವೇ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಫಿರೋಜಾಬಾದ್ ಬಳಿ ನಡೆದಿದೆ.

ಅಲಹಾಬಾದ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ,ಲಾರಿಗೆ ಗುದ್ದಿ ನಂತರ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಉತ್ತರ ಪ್ರದೇಶ ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ರವಿನೇಶ್ ಪಾಂಡೆ, ಆತನ ಪತ್ನಿ ರೂಬಿ ಪಾಂಡೆ ಹಾಗೂ ಈ ದಂಪತಿಯ ಮೂವರು ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,ಲಾರಿ ಚಾಲಕನಿಗಾಗಿ ಶೋಧ ಮುಂದುವರಿದಿದೆ.

- Advertisement -

Latest News

error: Content is protected !!