Thursday, June 4, 2026
Homeಕರಾವಳಿಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಂಸದ ತೇಜಸ್ವಿ ಸೂರ್ಯ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಂಸದ ತೇಜಸ್ವಿ ಸೂರ್ಯ

- Advertisement -
- Advertisement -

ಬೆಳ್ತಂಗಡಿ : ಸಂಸದ ತೇಜಸ್ವಿ ಸೂರ್ಯ ಫೆ.27 ರಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸಿ ಮಂಜುನಾಥ ದರ್ಶನ ಪಡೆದು ನಂತರ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಭೇಟಿ ಬಳಿಕ ಸುಮಾರು 15 ನಿಮಿಷ ನಿಂತುಕೊಂಡೆ ಭಕ್ತರೆಲ್ಲರು ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಮಾತಾನಾಡುವ ದೃಶ್ಯಗಳನ್ನು ನೋಡಿ ಖುಷಿಪಟ್ಟರು‌‌.  ಬಳಿಕ ಧರ್ಮಸ್ಥಳದಿಂದ ವಿವಿಧ ದೇವಸ್ಥಾನಗಳಿಗೆ ನೀಡುವ ಧನಸಹಾಯಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು‌.

ದರ್ಶನ ವೇಳೆ ಹಲವು ಭಕ್ತರು ಸಂಸದರನ್ನು ಕಂಡು ಓಡೋಡಿ ಬಂದು ಸೆಲ್ಪಿತೆಗೆಸಿಕೊಂಡು ಖಷಿಪಟ್ಟರು.ಅದಲ್ಲದೆ ಭಕ್ತರನ್ನು ನೋಡಿ ನಮಸ್ಕರಿಸಿ ಮಾತಾನಾಡಿದರು.ಭೇಟಿ ವೇಳೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್ ಜೈನ್ ಮತ್ತು ದೀಕ್ಷಿತ್ ದೇವರ ದರ್ಶನಕ್ಕೆ ಸಹಕರಿಸಿದರು

- Advertisement -

Latest News

error: Content is protected !!