Saturday, May 4, 2024
Homeಕರಾವಳಿಮಾಣಿ: ಕೊಡಾಜೆ ಪರಿಸರದಲ್ಲಿ ಆತಂಕಕ್ಕೆ ಕಾರಣವಾದ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್: ಸ್ಥಳೀಯರಲ್ಲಿ ಕಾಡುತ್ತಿದೆ ಮಾರಕ ರೋಗಗಳ...

ಮಾಣಿ: ಕೊಡಾಜೆ ಪರಿಸರದಲ್ಲಿ ಆತಂಕಕ್ಕೆ ಕಾರಣವಾದ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್: ಸ್ಥಳೀಯರಲ್ಲಿ ಕಾಡುತ್ತಿದೆ ಮಾರಕ ರೋಗಗಳ ಭೀತಿ

spot_img
- Advertisement -
- Advertisement -

ಮಾಣಿ:ಕೊಡಾಜೆ ಪ್ರದೇಶದಲ್ಲಿ ಭಾರೀ ವಿರೋಧದ ನಡುವೆಯೂ ತಲೆಯೆತ್ತಿ ನಿಂತ ಪ್ರೋ – ಮಿಕ್ಸ್ ಎಂಬ ಕಾಂಕ್ರೀಟ್ ರೆಡಿ ಮಿಕ್ಸಿಂಗ್ ಕೈಗಾರಿಕಾ ಘಟಕ ಮಾರಕ ರೋಗಗಳಿಗೆ ಕಾರಣವಾಗುವ ಆತಂಕ ಎದುರಾಗಿದೆ.  

ಕಾಂಕ್ರೀಟ್‌ ಮಿಕ್ಸಿಂಗ್‌ ಘಟಕದಿಂದ ವಿಪರೀತ ಧೂಳು, ಹೊಗೆ ಬರ್ತಿದ್ದು ಸ್ಥಳೀಯರು ನಾನಾ ಖಾಯಿಲೆಗಳಿಂದ ಬಳಲುವಂತಾಗಿದೆ. ಅಷ್ಟೇ ಅಲ್ಲ ಇದ್ರಿಂದ ಕೃಷಿಗೂ ಹಾನಿಯಾಗ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ.

ಇನ್ನು ಮಾಣಿ – ಮೈಸೂರು ರಾ. ಹೆ. 75ರ ಬಲ ಮತ್ತು ಎಡ ಭಾಗದಲ್ಲಿ ಕಾಣಸಿಗುವ ಪ್ರದೇಶ ಕೊಡಾಜೆ ಗಡಿಸ್ಥಳ ಹಿರಿಯ ಕಾಲಘಟ್ಟಗಳಿಂದ ಧಾರ್ಮಿಕ ಆಚರಣೆಗೆ ಸಾಕ್ಷಿಯಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಸ್ಥಳದಲ್ಲೀಗ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ನಿಂದಾಗಿ ಉಸಿರಾಡಲೂ ಕಷ್ಟವಾಗ್ತಿದೆ.  ಆದಷ್ಟು ಬೇಗ ಸಂಬಂಧಪಟ್ಟ  ಅಧಿಕಾರಿಗಳು ಇತ್ತ ಗಮನಹರಿಸಿ ಈ ಪ್ಲಾಂಟೇಷನ್‌ನ ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

- Advertisement -
spot_img

Latest News

error: Content is protected !!