Saturday, June 6, 2026
Homeಕರಾವಳಿಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣ; ವಿಹೆಚ್ ಪಿ ನಾಯಕ ಶರಣ್ ಪಂಪ್ವೆಲ್ ಸಲ್ಲಿಸಿದ ನಿರೀಕ್ಷಣಾ ಜಾಮೀನು...

ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣ; ವಿಹೆಚ್ ಪಿ ನಾಯಕ ಶರಣ್ ಪಂಪ್ವೆಲ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ

- Advertisement -
- Advertisement -

ತುಮಕೂರು;  ಪ್ರಚೋದನಾಕಾರಿ ಭಾಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಹೆಚ್ ಪಿ ನಾಯಕ ಶರಣ್ ಪಂಪ್ ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುಮಕೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ,ಪ್ರಕರಣದಲ್ಲಿ ಜಾಮೀನು‌ ನೀಡಿದರೆ ಸಾರ್ವಜನಿಕ ಶಾಂತಿಯನ್ನು ಹಾಳು ಮಾಡುವ ಉದ್ದೇಶದಿಂದ ಮತ್ತೆ ಭಾಷಣ ಮಾಡುವ ಸಾಧ್ಯತೆ ಬಗ್ಗೆ ಗಮನಿಸಿದೆ ಎಂದಿದೆ.

ಜನವರಿ 28 ರಂದು ಸಂಘಪರಿವಾರದ ಶೌರ್ಯ ಕಾರ್ಯಕ್ರಮದಲ್ಲಿ ಶರಣ್ ಪಂಪ್‌ವೆಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಸುರತ್ಕಲ್ ಫಾಝಿಲ್ ಹತ್ಯೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. ಇದರ ವಿರುದ್ಧ ಸೈಯದ್ ಬುರ್ಹಾನುದ್ದೀನ್ ಎಂಬವರು ತುಮಕೂರು ನಗರ ಠಾಣೆಗೆ ದೂರು ನೀಡಿದ್ದರು.

- Advertisement -

Latest News

error: Content is protected !!