Friday, June 5, 2026
Homeಕರಾವಳಿಮೂಡಬಿದಿರೆ; ಮೊಬೈಲ್ ಕೊಡಲಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ

ಮೂಡಬಿದಿರೆ; ಮೊಬೈಲ್ ಕೊಡಲಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ಮೂಡಬಿದಿರೆ; ಮೊಬೈಲ್ ಕೊಡಲಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ನಡೆದಿದೆ.ಉಮೇಶ್‌ ಪೂಜಾರಿ ಎಂಬವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಭಾನುವಾರ ಯತಿಯ ತಾಯಿ ಹಾಗೂ ತಂಗಿ ಶಿರ್ತಾಡಿಗೆ ಹೊರಟಿದ್ದರು. ಆದರೆ ಯತಿ ಹೋಗಲು ನಿರಾಕರಿಸಿದ್ದು, ಮೊಬೈಲ್‌ ಕೊಡುವಂತೆ ತಾಯಿಯಲ್ಲಿ ಹೇಳಿದ್ದಾರೆ. ಆದರೆ ತಾಯಿ ಮೊಬೈಲ್ ಈಗ ಕೊಡುವುದಿಲ್ಲ, ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ಹೋಗಿದ್ದರು.

ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಸಂಜೆ ವೇಳೆ ಮನೆ ಬಳಿ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

- Advertisement -

Latest News

error: Content is protected !!