Monday, June 8, 2026
Homeಕರಾವಳಿಮೂಡಬಿದಿರೆ:ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ

ಮೂಡಬಿದಿರೆ:ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ

- Advertisement -
- Advertisement -

ಮೂಡಬಿದಿರೆ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಂಜೆಕ್ಷನ್‌ಗಾಗಿ ಕುರ್ಚಿಯಲ್ಲಿ ಕುಳಿತಿದ್ದ ಎರಡೂವರೆ ವರ್ಷದ ಹೆಣ್ಣುಮಗುವೊಂದರ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೋಟೆಬಾಗಿಲಿನ  ಮಹಮ್ಮದ್ ಅಕ್ಬರ್ ಎಂಬವರ ಎರಡೂವರೆ ವರ್ಷದ ಹೆಣ್ಣು ಮಗುವಿನ ತನ್ನ ತಂದೆ ತಾಯಿ ಜೊತೆ ಕುರ್ಚಿಯಲ್ಲಿ ಕುಳಿತಿತ್ತು.  ಆಗ ಆಸ್ಪತ್ರೆಯ ಸುತ್ತ ಓಡಾಡುತ್ತಿದ್ದ ನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ಗಾಯಗೊಳಿಸಿದೆ.

ಬಳಿಕ ಮೂಡಬಿದಿರೆ ಆರೋಗ್ಯ ಕೇಂದ್ರಕ್ಕೆ ಇಂಜೆಕ್ಷನ್  ಪೂರೈಕೆ ಇಲ್ಲದಿರುವುದರಿಂದ ಮಗುವಿನ ಮನೆಯವರು ಖಾಸಗಿ ಆಸ್ಪತ್ರೆಯಿಂದ ತರಿಸಿ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಪೇಟೆಯಲ್ಲಿ ಈ ನಾಯಿ ಒಂದು ಮಗು ಸಹಿತ ಮೂವರ ಮೇಲೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!