Saturday, June 6, 2026
Homeತಾಜಾ ಸುದ್ದಿವರದಕ್ಷಿಣೆ ಕಿರುಕುಳ ಪ್ರಕರಣ: ನಟಿ ಅಭಿನಯಾಗೆ ಜಾಮೀನು

ವರದಕ್ಷಿಣೆ ಕಿರುಕುಳ ಪ್ರಕರಣ: ನಟಿ ಅಭಿನಯಾಗೆ ಜಾಮೀನು

- Advertisement -
- Advertisement -

ಅತ್ತಿಗೆ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಸಿದ ಪ್ರಕರಣ ಸಂಬಂಧ ನಟಿ ಅಭಿನಯಾ ಹಾಗೂ ಅವರ ತಾಯಿ ಮತ್ತು ಸಹೋದರನಿಗೆ ಹೈಕೋರ್ಟ್​ ಜೈಲು ಶಿಕ್ಷೆ ನೀಡಿತ್ತು. ಆದ್ರೆ ತಲೆಮರೆಸಿಕೊಂಡಿದ್ದ ಈ ಮೂವರಿಗೆ ಚಂದ್ರಲೇಔಟ್‌ ಪೊಲೀಸರು ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಿದ್ರು. ಇನ್ನು ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಮೊರೆ ಹೋದ ನಟಿ ಅಭಿನಯಾಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಿಂದ ನಟಿ ಸೇರಿ ಮೂವರಿಗೂ ಜಾಮೀನು ಮಂಜೂರಾಗಿದೆ.

ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಅಭಿನಯಾಗೆ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಆದ್ರೆ ಅಭಿನಯಾ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ರು. ಈ ಹಿನ್ನೆಲೆಯಲ್ಲಿ ಮೂವರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ.

- Advertisement -

Latest News

error: Content is protected !!