Monday, June 8, 2026
Homeಕರಾವಳಿಕಡಬ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಡಬ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಕಡಬ:ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 33 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಕಡಬ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಕ್ವೆ ನಿವಾಸಿ ದೇವಪ್ಪ ಗೌಡರ ಪುತ್ರ ಹರಿಪ್ರಸಾದ್ ಬಂಧನಕ್ಕೊಳಗಾದ ಆರೋಪಿ.

ಕಡಬ ಠಾಣೆಯಲ್ಲಿ ಈತನ ವಿರುದ್ದ 341,326,506 ಜೊತೆಗೆ ಐ34 ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ನ್ಯಾಯಾಲಯವು ಜನವರಿ 21 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ‌.

ಪುತ್ತೂರು ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಕಡಬ ಠಾಣಾ ಎಸ್. ಐ ಆಂಜನೇಯ ರೆಡ್ಡಿ ನಿರ್ದೇಶನದಂತೆ ಕಡಬ ಠಾಣಾ ಎಚ್.ಸಿ ರಾಜು ನಾಯಕ್ ಮತ್ತು ಸಿರಾಜುದ್ದೀನ್ ಮೈಸೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.

- Advertisement -

Latest News

error: Content is protected !!