Saturday, June 6, 2026
Homeಕರಾವಳಿರಾಹುಲ್ ಗಾಂಧಿ ಆಪ್ತ ಎಂದು ಹೇಳಿ ಯು ಟಿ ಖಾದರ್ ಗೆ ವಂಚನೆ ಯತ್ನ; ವ್ಯಕ್ತಿಯ...

ರಾಹುಲ್ ಗಾಂಧಿ ಆಪ್ತ ಎಂದು ಹೇಳಿ ಯು ಟಿ ಖಾದರ್ ಗೆ ವಂಚನೆ ಯತ್ನ; ವ್ಯಕ್ತಿಯ ವಿರುದ್ಧ ದೂರು ದಾಖಲು

- Advertisement -
- Advertisement -

ಮಂಗಳೂರು: ರಾಹುಲ್ ಗಾಂಧಿ ಆಪ್ತ ಎಂದು ಹೇಳಿಕೊಂಡು ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರಿಗೆ ಅಪರಿಚಿತನೊಬ್ಬ ಫೋನ್ ಕರೆ ಮಾಡಿ ವಂಚಿಸಲು ಯತ್ನಿಸಿದ್ದಾನೆ.

ಯು.ಟಿ. ಖಾದರ್‌ ಅವರು ಈ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್‌ ರಿಗೆ ದೂರು ನೀಡಿದ್ದು, ಖಾದರ್ ಅವರಿಗೆ ವಂಚಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಸೋಮವಾರ ಮಧ್ಯಾಹ್ನ ಯು.ಟಿ.ಖಾದರ್ ಅವರ ಮೊಬೈಲ್ ಗೆ 8146006626 ನಂಬರ್‌ನಿಂದ ಕರೆ ಬಂದಿತ್ತು. ಸಭೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ತಕ್ಷಣ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಎರಡು ಬಾರಿ ಪೋನ್ ಕರೆ ಬಂದಿತ್ತು. ಸಭೆ ಮುಗಿಸಿ ಮೊಬೈಲ್‌ನ್ನು ನೋಡಿದಾಗ ‘Good afternoon this side Kaniskha Singh pa to sri rahul Gandhi ji call me’ ಎಂದು ಮೆಸೇಜ್ ಬಂದಿತ್ತು. ಈ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಕಾರ್ಯದರ್ಶಿ .ಕೆ.ಸಿ. ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರೂ ಕಾಲರ್ ಮೂಲಕ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!