Wednesday, June 3, 2026
Homeಕರಾವಳಿಕರಾವಳಿಯಲ್ಲಾದ ಎಲ್ಲಾ ಹತ್ಯೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು: ಸುರತ್ಕಲ್ ನಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ...

ಕರಾವಳಿಯಲ್ಲಾದ ಎಲ್ಲಾ ಹತ್ಯೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು: ಸುರತ್ಕಲ್ ನಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಆಗ್ರಹ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಾದ ಎಲ್ಲಾ ಹತ್ಯೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.

ಸುರತ್ಕಲ್ ನಲ್ಲಿ ಹೇಳಿಕೆ ನೀಡಿದ ಶಾಫಿ ಸಅದಿ, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳು ಆತಂಕಕ್ಕೆ ಕಾರಣವಾಗಿದ್ದು, ಹತ್ಯೆಯ ಹಿಂದೆ ರಾಜಕೀಯದ ಜೊತೆಗೆ ಬೇರೆ ಷಡ್ಯಂತ್ರವೂ ಇದ್ದು ಅದನ್ನು ಬಯಲಿಗೆಳೆಯುವ ಕೆಲಸ ಸಿಬಿಐ ತನಿಖೆ ಮೂಲಕ ಆಗಬೇಕು ಎಂದು ಹೇಳಿದ್ದಾರೆ

ಕೊಲೆ ನಡೆಸಿದ ಆರೋಪಿಗಳು ಕೇವಲ 15 ದಿನದೊಳಲ್ಲಿ ಹೊರಗೆ ಬರುತ್ತಿದ್ದು, ಕೊಲೆಯಲ್ಲಿ ಭಾಗಿಯಾದವರಿಂದಲೇ 10 ಕೋಟಿ ರೂಪಾಯಿ ಹಣ ವಸೂಲಿ ಮಾಡಬೇಕು ಎಂದು ಹೇಳಿದ್ದಾರೆ. ‌

ಅಲ್ಲದೇ ಆ ಹಣವನ್ನು ಆಸ್ತಿ ಮುಟ್ಟುಗೋಲು ಹಾಕಿಯಾದರೂ ವಸೂಲಿ ಮಾಡಿ ಅದನ್ನು ಕೊಲೆಗೀಡಾದವರ ಕುಟುಂಬಕ್ಕೆ ನೀಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಸಅದಿ ಹೇಳಿದ್ದಾರೆ.

- Advertisement -

Latest News

error: Content is protected !!