Saturday, June 6, 2026
Homeಕರಾವಳಿನಾಳೆ ಮೂಡಬಿದಿರೆಗೆ ಸಿಎಂ ಬೊಮ್ಮಾಯಿ‌

ನಾಳೆ ಮೂಡಬಿದಿರೆಗೆ ಸಿಎಂ ಬೊಮ್ಮಾಯಿ‌

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿಎಂ, ನಂತರ ರಸ್ತೆ ಮಾರ್ಗವಾಗಿ ಮೂಡಬಿದಿರೆಗೆ ತೆರಳಲಿದ್ದಾರೆ.

ಮೂಡಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಆಯೋಜಿಸಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಹಾಗೂ ಏಕ್ ಭಾರತ್-ಶ್ರೇಷ್ಠ್ ಭಾರತ್ , ನಮ್ಮ ಸಂಸ್ಕೃತಿ, ಸ್ವಚ್ಛ ಸಂಸ್ಕೃತಿ, ಸಂಸ್ಕೃತಿಯಿಂದ ಯುವಜನರ ಒಗ್ಗಟ್ಟು ಕಾರ್ಯಕ್ರಮಗಳನ್ನು ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.

ನಂತರ ರಾತ್ರಿ 7 ಗಂಟೆಗೆ ಮೂಡಬಿದಿರೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಸಿಎಂ, ರಾತ್ರಿ 8 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳಲಿದ್ದಾರೆ.

- Advertisement -

Latest News

error: Content is protected !!