Saturday, June 6, 2026
Homeಕರಾವಳಿಸಚಿವ ಆನಂದ ಸಿಂಗ್ ರವರಿಗೂ  ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ: ಸಚಿವ ಸಂಪುಟಲ್ಲಿದ್ರೂ ನಮ್ಮ‌ ಜೊತೆ ಸಹೋದರರ...

ಸಚಿವ ಆನಂದ ಸಿಂಗ್ ರವರಿಗೂ  ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ: ಸಚಿವ ಸಂಪುಟಲ್ಲಿದ್ರೂ ನಮ್ಮ‌ ಜೊತೆ ಸಹೋದರರ ರೀತಿಯಲ್ಲಿ ಇರುತ್ತಾರೆ: ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ‌ ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ  ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ  ಆನಂದ್ ಸಿಂಗ್ ಎರಡು ದಿನ ಬೆಳ್ತಂಗಡಿ ತಾಲೂಕಿನ ಪ್ರವಾಸದಲ್ಲಿದ್ದು ಡಿ.16 ರಂದು ಸಂಜೆ ಧರ್ಮಸ್ಥಳದ ಸಿ.ಎ.ಬ್ಯಾಂಕ್ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ವೇಳೆ ಬಿಜೆಪಿ ಮಂಡಲದ ವತಿಯಿಂದ ಸನ್ಮಾಸಲಾಯಿತು.

ಈ ವೇಳೆ ಮಾತಾನಾಡಿದ ಶಾಸಕ‌ ಹರೀಶ್ ಪೂಂಜವರವರು  ಸಚಿವ ಆನಂದ ಸಿಂಗ್ ರವರಿಗೂ  ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧ ಇದೆ‌ .16 ವರ್ಷಗಳ ಹಿಂದೆ ಇವರು ಧರ್ಮಸ್ಥಳ  ಕ್ಷೇತ್ರಕ್ಕೆ ಒಂದು  ಆನೆಯನ್ನು ಕೊಟ್ಟಿದ್ದನ್ನು  ಈ ಕ್ಷಣದಲ್ಲಿ‌‌ ನಾವು ನೆನೆಪಿಸಿಕೊಳ್ಳಬಹುದು. ಪ್ರವಾಸೋದ್ಯಮ ಸಚಿವರಾಗಿ‌ ನಾವು ಏನೇ ಬೇಡಿಕೆ ಇಟ್ಟರು ಇಲ್ಲ ಎನ್ನುವವರಲ್ಲ. ಈಗ ಸೌತಡ್ಕ  ದೇವಸ್ಥಾನದ ಬಗ್ಗೆ ಮನವಿ ನೀಡಿದಾಗಲೂ ಮೂಲ ಭೂತ ದೃಷ್ಟಿಯಿಂದ 25 ಲಕ್ಷ ರೂ. ನೀಡುತ್ತೇವೆ ಎಂದಿದ್ದಾರೆ. ಶಿಶಿಲ ದೇವಸ್ಥಾನಕ್ಕೂ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ. ಅಷ್ಟು‌ ಸರಳ ಸಜ್ಜನಿಕೆಯ ವ್ಯಕ್ತಿ ಆನಂದ್ ಸಿಂಗ್. ಸಚಿವ ಸಂಪುಟದಲ್ಲಿದ್ರೂ ಸಹೋದರರ ರೀತಿಯಲ್ಲಿ ನಮ್ಮ‌ ಜೊತೆಗೆ ಇರುತ್ತಾರೆ ಎಂದರು

- Advertisement -

Latest News

error: Content is protected !!