Thursday, June 4, 2026
Homeಕರಾವಳಿದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಕಾರು; ಬೈಕ್ ಸವಾರನಿಗೆ ಗಂಭೀರ ಗಾಯ

ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಕಾರು; ಬೈಕ್ ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ವಿಟ್ಲ: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ  ಸಮೀಪದ ಕೊಡಾಜೆ ಎಂಬಲ್ಲಿ ಡಿ.16 ರಂದು ಶುಕ್ರವಾರ ಮಧ್ಯಾಹ್ನ ನಡೆದಿದೆ. ಪುತ್ತೂರು ಸಮೀಪದ ಕುಂಡಡ್ಕ ನಿವಾಸಿ ಕಿರಣ್‌ ಗಾಯಗೊಂಡ ಯುವಕ.

ಪುತ್ತೂರಿನಿಂದ ಮಂಗಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕೊಡಾಜೆ ಎಂಬಲ್ಲಿ ಎದುರಿನಿಂದ ಅತೀ ವೇಗದಿಂದ ಬಂದ ಕಾರು ನೇರವಾಗಿ ಬೈಕ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.

ಕಾರು ಕೂಡ ರಸ್ತೆಯ ಪಕ್ಕಕ್ಕೆ ಸರಿದು ಹೊಂಡಕ್ಕೆ ವಾಲಿ ನಿಂತಿದೆ. ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ಸವಾರನನ್ನು ರಿಕ್ಷಾದಲ್ಲಿ ಮಾಣಿ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ 108 ಆಯಂಬುಲೆನ್ಸ್‌ ವಾಹನದ ಮೂಲಕ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!