Thursday, June 4, 2026
Homeಕರಾವಳಿಸುಳ್ಯದ ಲಾಡ್ಜ್ ನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿ ಬಿದ್ದ ವಿವಾಹಿತ ಯುವಕ; ವಿಷಯ ತಿಳಿದು ಲಾಡ್ಜ್ ಬಳಿ...

ಸುಳ್ಯದ ಲಾಡ್ಜ್ ನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿ ಬಿದ್ದ ವಿವಾಹಿತ ಯುವಕ; ವಿಷಯ ತಿಳಿದು ಲಾಡ್ಜ್ ಬಳಿ ಬಂದು ಪತ್ನಿಯಿಂದ ಗಲಾಟೆ

- Advertisement -
- Advertisement -

ಸುಳ್ಯ: ಇಲ್ಲಿನ ಲಾಡ್ಜ್ ಒಂದರಲ್ಲಿ ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ಬಂದು ತಂಗಿದ್ದಾನೆಂದು ತಿಳಿದು ಆತನ  ಪತ್ನಿ ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಜಗಳ ಮಾಡಿದ ಘಟನೆ ಡಿಸೆಂಬರ್ 11 ರಂದು ನಡೆದಿದೆ.

ಇನ್ನು ಲಾಡ್ಜ್ ನಲ್ಲಿ ಯುವತಿಯ ಜೊತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾನೆ. ಈ ಜೋಡಿಯನ್ನು ನೋಡಿದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಈ ವೇಳೆ ನೂರಾರು ಜನ ಜಮಾಯಿಸಿದ್ದು, ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.

ಕೊನೆಗೆ ಪತಿ ಹಾಗೂ ಮತ್ತವನ ಪ್ರೇಯಸಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ‌. ಪೊಲೀಸರಿಗೆ ವಿಷಯ ತಿಳಿದು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!