Saturday, June 6, 2026
Homeಕೊಡಗುಕೊಡಗಿನಲ್ಲಿ ಹಸುವಿನ ಮೇಲೆ ಅತ್ಯಾಚಾರ ಎಸಗಿದವನ ಬಂಧನ; 15 ದಿನಗಳಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದ ಪಾಪಿ

ಕೊಡಗಿನಲ್ಲಿ ಹಸುವಿನ ಮೇಲೆ ಅತ್ಯಾಚಾರ ಎಸಗಿದವನ ಬಂಧನ; 15 ದಿನಗಳಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದ ಪಾಪಿ

- Advertisement -
- Advertisement -

ಕೊಡಗು; ವ್ಯಕ್ತಿಯೊಬ್ಬ ಹಸುವಿನ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮೇಯುತ್ತಿದ್ದ ಹಸುವಿನ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅಬೂಬಕ್ಕರ್‌ ಸಿದ್ದಿಕಿ (40)ಯನ್ನು ಪೊಲೀಸರು ಬಂಧಿಸಿದ್ದಾರೆ.

, ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ‌ ಸಮೀಪದ ಅಂದಗೋವೆ ನಿವಾಸಿ ದೇವಯ್ಯ  ಅವರು ತಮ್ಮ ಮೂರು ಹಸುಗಳನ್ನ ಗದ್ದೆಯಲ್ಲಿ ಕಟ್ಟುತ್ತಿದ್ದರು. ಆರೋಪಿ 15 ದಿನಗಳಿಂದ ಅದರಲ್ಲಿ ಒಂದು ಹಸುವಿನ ಮೇಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ದೇವಯ್ಯ ಅವರು ಸುಂಟಿಕೊಪ್ಪ ಪೊಲಿಸರಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಅಬುಬಕ್ಕರ್ ಮತ್ತು ಹಸುವಿಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ತನಿಖೆ ಮುಂದುವರಿಸಿದ್ದಾರೆ.

ಅಂದ್ಹಾಗೆ ನಡೆದಿದ್ದೇನು?; ದಿನಾಂಕ 27-11-2022ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ದೇವಯ್ಯ ಅವರು ಸುಂಟಿಕೊಪ್ಪ ಸಂತೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಾಗ ಗದ್ದೆಯ ದಾರಿಯಲ್ಲಿ ಒಂದು ಕೆಂಪು ಬಣ್ಣದ ಕೆಎ -09-6223 ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್​ ನಿಂತಿತ್ತು. ಅದನ್ನು ಗಮನಿಸಿದ ದೇವಯ್ಯ ಅವರು ಮನೆಗೆ ಹೋಗಿ ಬಟ್ಟೆ ಸಂತೆಯಲ್ಲಿ ತಂದಿದ್ದ ಸಾಮಾನುಗಳನ್ನು ಇಟ್ಟು ಗದ್ದೆಯ ಬಳಿ ಹೋದಾಗ ಹಸುವಿನೊಂದಿಗೆ ಸಂಭೋಗ ನಡೆಸುತ್ತಿದ್ದ. ಬಳಿಕ ದೇವಯ್ಯರನ್ನು ನೋಡಿ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಆದರೂ ದೇವಯ್ಯ ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ. ಬಳಿಕ ಆರೋಪಿ ಅಬೂಬಕ್ಕರ್ ಹಾಗೂ ಆತನ ಹೀರೋ ಹೋಂಡಾ ಪ್ಯಾಷನ್ ಪ್ರೋ ಬೈಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!