Thursday, June 4, 2026
Homeಕರಾವಳಿಮಂಗಳೂರು; ಭೀಪ್ ಬಿರಿಯಾನಿ ಇದೆ ಎಂದು ಹೋಟೆಲ್ ಮೇಲೆ ದಾಳಿ ಮಾಡಿದ  ಪೊಲೀಸರು

ಮಂಗಳೂರು; ಭೀಪ್ ಬಿರಿಯಾನಿ ಇದೆ ಎಂದು ಹೋಟೆಲ್ ಮೇಲೆ ದಾಳಿ ಮಾಡಿದ  ಪೊಲೀಸರು

- Advertisement -
- Advertisement -

ಮುಡಿಪು;ಗೋಮಾಂಸದ ಖಾದ್ಯ ಇದೆ ಎಂದ ಹೊಟೇಲ್ ಮೇಲೆ ದಾಳಿ ಮಾಡಿರುವ ಘಟನೆ ಮಂಗಳೂರಿನ ಮುಡಿಪು ಎಂಬಲ್ಲಿ‌ ನಡೆದಿದೆ.

ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ ಇದೆ ಎಂದು ಗ್ರಾಹಕರನ್ನು ಸೆಳೆಯಲು ಮಾಡಿದ ವಿಡಿಯೋದಲ್ಲಿ ಹೇಳಲಾಗಿತ್ತು. ಇದನ್ನು ನೋಡಿದ ಹಿಂದೂ ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ.

ಪೊಲೀಸರ ಜೊತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೊಟೇಲ್ ಗೆ ದಾಳಿ ಮಾಡಿ ಗೋಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌. ಈ ವೇಳೆ ಗೋಮಾಂಸದ ಖಾದ್ಯ ಪತ್ತೆಯಾಗಿದೆ ಎನ್ನಲಾಗಿದ್ದು,ಕೊಣಾಜೆ ಪೊಲೀಸರು ಹೋಟೆಲ್ ಮಾಲೀಕ ಹುಸೇನ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ .

- Advertisement -

Latest News

error: Content is protected !!