Saturday, October 17, 2026
Homeಕರಾವಳಿಮಂಗಳೂರು: ನೀರಿಗೆ ಬಿದ್ದು ಕೂಲಿ ಕಾರ್ಮಿಕ ಸಾವು

ಮಂಗಳೂರು: ನೀರಿಗೆ ಬಿದ್ದು ಕೂಲಿ ಕಾರ್ಮಿಕ ಸಾವು

- Advertisement -
- Advertisement -

ಮಂಗಳೂರು: ನೀರಿಗೆ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ದಕ್ಷಿಣ ದಕ್ಕೆಯಲ್ಲಿ ನಡೆದಿದೆ. ಸಂತೋಷ ಮೃತ ದುರ್ದೈವಿ.

ರಾತ್ರಿ 7.30ರ ವೇಳೆಗೆ ನದಿಯಲ್ಲಿ ತೇಲುತ್ತಿದ್ದ ಸಂತೋಷ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಎಣ್ಣೆಕಪ್ಪು ಮೈಬಣ್ಣ, 5.4 ಅಡಿ ಎತ್ತರ, ಸಾಧಾರಣ ಶರೀರ, ಕೋಲುಮುಖ ಹೊಂದಿದ್ದು ಕಪ್ಪು, ಕೆಂಪು, ನೀಲಿ, ಬಿಳಿ ಪಟ್ಟಿಗಳಿರುವ ಅರ್ಧ ತೋಳಿನ ಟೀಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದರು. ಬಲಗೈಯಲ್ಲಿ ಕಪ್ಪು ಮಚ್ಚೆ ಇದೆ. ವಾರಸುದಾರರು ಇದ್ದರೆ ದಕ್ಷಿಣ ಪೊಲೀಸ್‌ ಠಾಣೆ (0824-2220518)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!