ಮೂಡಬಿದಿರೆ: ಇಲ್ಲಿನ ಕಡಲಕೆರೆಯಲ್ಲಿ ಡಿ. 24ರಂದು 20ನೇ ವರ್ಷದ ಕೋಟಿ-ಚೆನ್ನಯ ಕಂಬಳ ನಡೆಯಲಿದೆ. ಈ ಕಂಬಳಕ್ಕೆ ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರ ತಂಡದವರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಸಚಿವ ಸಿ.ಟಿ.ರವಿ ಕಂಬಳದಲ್ಲಿ ಭಾಗಿಯಾಗಲಿದ್ದಾರೆ.ಇದೇ ವೇಳೆ, ಮೂಡಬಿದಿರೆಯಲ್ಲಿ ಡಿ.21ರಿಂದ ವಾರಕಾಲ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ದೇಶ ವಿದೇಶಗಳ ಆಗಮಿಸಲಿರುವ ಸಹಸ್ರಾರು ವಿದ್ಯಾರ್ಥಿಗಳೂ ಕಂಬಳ ವೀಕ್ಷಣೆ ಮಾಡಲಿದ್ದು ಕಂಬಳವನ್ನು ವಿಶ್ವದ ಮಾತಾಗಿಸುವ ಸಂದರ್ಭ ಒದಗಿ ಬರಲಿದೆ.
ಪ್ರವಾಸಿ ಕೇಂದ್ರ ಮೂಡಬಿದಿರೆಯಲ್ಲಿ ಭಾರೀ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದ್ದಾರೆ.ಇನ್ನು ಇದೇ ವೇಳೆ ಕೃಷಿ ಸಾಧಕರನ್ನು ಗೌರವಿಸಲು ನಿರ್ಧರಿಸಲಾಗಿದ್ದು ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು, ಜನರು ಬರುವುದರಿಂದ ಸ್ವಯಂ ಸೇವಕರು, ಕಂಬಳ ಪ್ರೇಮಿಗಳು ಸಹಕರಿಸಬೇಕಾಗಿ ಮನವಿ ಮಾಡಿದ್ದಾರೆ.