Friday, June 5, 2026
Homeಕರಾವಳಿಉಡುಪಿಹೆಬ್ರಿ: ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗ್ನಿ ಅನಾಹುತ: ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಹೆಬ್ರಿ: ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗ್ನಿ ಅನಾಹುತ: ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

- Advertisement -
- Advertisement -

ಹೆಬ್ರಿ: ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನ.೯(ಬುಧವಾರ)ರಂದು ಸಂಜೆ ನಡೆದಿದೆ.  

ಶ್ರೀನಿವಾಸ್, ಅಮರೇಶ್, ವಿನೋದ್ ಮತ್ತು ಮನೋಜ್ ಗಾಯಗೊಂಡ ವಿದ್ಯಾರ್ಥಿಗಳು. ನಾಲ್ವರು ಗಾಯಾಳುಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಅದರಲ್ಲಿ ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದ ಕಾರಣ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಹಾಸ್ಟೆಲ್‌ನ ಹಿಂಭಾಗದಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುವ ವೇಳೆ ಸ್ಯಾನಿಟೈಸರ್‌ ಬಾಟಲಿಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!