Thursday, June 4, 2026
Homeಕರಾವಳಿಮಂಗಳೂರು: ಶ್ರೀ ಮಂಗಳಾದೇವಿ ದೇಗುಲದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ ವಿಧಿವಶ

ಮಂಗಳೂರು: ಶ್ರೀ ಮಂಗಳಾದೇವಿ ದೇಗುಲದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ ವಿಧಿವಶ

- Advertisement -
- Advertisement -

ಮಂಗಳೂರು: ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ನಗರದ ಶ್ರೀಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್(49) ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಶ್ರೀಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪೂಜಾ ಮನೆತನಕ್ಕೆ ಸೇರಿದ ಇವರು, ಈ ವರ್ಷದ ಪ್ರಧಾನ ಅರ್ಚಕರಾಗಿ ನಿಯುಕ್ತಿಗೊಂಡಿದ್ದರು.

ಇವರು ಉತ್ತಮ ಕ್ರಿಕೆಟ್ ಆಟಗಾರನಾಗಿದ್ದು, ಸ್ಥಳೀಯ ತಂಡದಲ್ಲಿ ಹಾಗೂ ಬ್ರಾಹ್ಮಣ ಯುವಕರ ತಂಡದಲ್ಲಿ ಸಕ್ರೀಯವಾಗಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಾಮಾಜಿಕ ಚಟುವಟಿಕೆಯಲ್ಲಿದ್ದರು.

ತಾಯಿ ಜಲಜಾಕ್ಷಿ, ಸಹೋದರ ವೇದಮೂರ್ತಿ ಚಂದ್ರಶೇಖರ್ ಐತಾಳ್, ಹರೀಶ್ ಐತಾಳ್, ಸಹೋದರಿ ಲಕ್ಷ್ಮೀ ಹೊಳ್ಳರನ್ನು ಆಗಲಿದ್ದಾರೆ.

- Advertisement -

Latest News

error: Content is protected !!