Wednesday, June 24, 2026
Homeಕರಾವಳಿಕಡಬ; ಕಾಣಿಯೂರಿನಲ್ಲಿ ದಲಿತ ಮಹಿಳೆಯ ಮಾನಭಂಗ ಯತ್ನ ಪ್ರಕರಣ: ಸಂತ್ರಸ್ತೆಯ ಮನೆಗೆ ಕೇಂದ್ರ ಸಚಿವೆ ಶೋಭಾ...

ಕಡಬ; ಕಾಣಿಯೂರಿನಲ್ಲಿ ದಲಿತ ಮಹಿಳೆಯ ಮಾನಭಂಗ ಯತ್ನ ಪ್ರಕರಣ: ಸಂತ್ರಸ್ತೆಯ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

- Advertisement -
- Advertisement -

ಕಡಬ: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿಯಲ್ಲಿ ದಲಿತ ಮಹಿಳೆಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಸಚಿವರು ಈ ಘಟನೆ ತಿಳಿದವರು ಆಕ್ರೋಶಗೊಂಡು ಆರೋಪಿಗಳಿಗೆ ಹಲ್ಲೆ ನಡೆಸಿದ ಘಟನೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಧರ್ಮವನ್ನೂ ಎಳೆದು ತರುವ ಕೆಲಸವಾಗುತ್ತಿದೆ. ದಲಿತೆಯ ಮೇಲಿನ ಮಾನಭಂಗ ಯತ್ನ ಪ್ರಮಾಣವನ್ನೂ ಧರ್ಮದ ಕನ್ನಡಕದ ಮೂಲಕ ನೋಡುತ್ತಿರುವುದು ಸರಿಯಲ್ಲ. ಮಹಿಳೆಯ ಮೇಲಿನ ಮಾನಭಂಗ ಯತ್ನ ಪ್ರಕರಣವನ್ನೂ ಎಲ್ಲಾ ಧರ್ಮದವರೂ ಖಂಡಿಸಬೇಕು. ಕಠಿಣ ಶಿಕ್ಷೆಗೆ ಒತ್ತಾಯಿಸಬೇಕಿದೆ ಎಂದರು.

ಸಂತ್ರಸ್ತೆ ಹಾಗೂ ಮಹಿಳೆಯ ಪರವಾಗಿ ಸರಕಾರ ಇದೆ. ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಆರೋಪಿಗಳಿಗೆ ಅತೀ ಕಠಿಣ ಶಿಕ್ಷೆಯಾಗಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು

- Advertisement -

Latest News

error: Content is protected !!