Friday, June 5, 2026
Homeತಾಜಾ ಸುದ್ದಿಸೋನಿಯಾಗಾಂಧಿ ಪರ ಟ್ವೀಟ್‌ ಮಾಡಿದ ನಟಿ ರಮ್ಯಾ: ಮತ್ತೆ ರಾಜಕೀಯದಲ್ಲಿ ಸಕ್ರಿಯ!

ಸೋನಿಯಾಗಾಂಧಿ ಪರ ಟ್ವೀಟ್‌ ಮಾಡಿದ ನಟಿ ರಮ್ಯಾ: ಮತ್ತೆ ರಾಜಕೀಯದಲ್ಲಿ ಸಕ್ರಿಯ!

- Advertisement -
- Advertisement -

ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ,  ಈ ಸಿನಿಮಾಗೆ ಬೇರೊಬ್ಬ ನಾಯಕಿ ಬಂದಾಗಿದೆ. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣ, ಮತ್ತೆ ರಾಜಕಾರಣದಲ್ಲಿ ರಮ್ಯಾ ಸಕ್ರೀಯರಾಗ್ತಿರೋದು.

ಅಂದಹಾಗೇ ರಮ್ಯಾ ಅವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕೇವಲ ಸಿನಿಮಾ ಸುದ್ದಿಗಳು ಮಾತ್ರ ಕಾಣುತ್ತಿದ್ದವು. ಇದೀಗ ಮತ್ತೆ ರಾಜಕೀಯ ನಡೆ ಕುರಿತು ರಮ್ಯಾ ಟ್ವೀಟ್‌ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ರಮ್ಯಾ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಸೋನಿಯಾ ಗಾಂಧಿ ಪರ ಟ್ವೀಟ್‌ ವೊಂದನ್ನು ರಮ್ಯಾ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ, ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

- Advertisement -

Latest News

error: Content is protected !!