Sunday, June 7, 2026
Homeತಾಜಾ ಸುದ್ದಿಹಾಲು ಉತ್ಪಾದಕರಿಗೆ ದರ ಹೆಚ್ಚಳ ಸಂಬಂಧ ಸಿಎಂ ನಿರ್ಧಾರ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ

ಹಾಲು ಉತ್ಪಾದಕರಿಗೆ ದರ ಹೆಚ್ಚಳ ಸಂಬಂಧ ಸಿಎಂ ನಿರ್ಧಾರ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ

- Advertisement -
- Advertisement -

ಬೆಂಗಳೂರು: ಹಾಲು ಉತ್ಪಾದಕರಿಗೆ ದರ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಹಕಾರ ಸಚಿವರು, 14 ಹಾಲು ಉತ್ಪಾದಕ ಸಂಘಗಳು ದರ ಹೆಚ್ಚಿಸಲು ಮನವಿ ಕೊಟ್ಟಿದ್ದು, ದರ ಹೆಚ್ಚಿಸಿದರೆ ರೈತರಿಗೆ ಕೊಡುತ್ತೇವೆ ಅಂತಾ ಮನವಿ‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಹಾಲು ಖರೀದಿಸುವ ಗ್ರಾಹಕರು ದರ ಹೆಚ್ಚಿಸಬೇಡಿ ಎಂದು ಹೇಳುತ್ತಿದ್ದು, ಈ ಸಂಬಂಧ ಚರ್ಚೆ ನಡೆಸಿ ಸಿಎಂ ತೀರ್ಮಾನ‌ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

- Advertisement -

Latest News

error: Content is protected !!