Thursday, June 4, 2026
Homeಪ್ರಮುಖ-ಸುದ್ದಿಪರೇಶ್‌ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್‌ ಸಲ್ಲಿಸಿದ್ರೂ ತಪ್ಪು ಅಂತಾರೆ: ಹಾಗಾದ್ರೆ ಗೃಹಸಚಿವ ಅಮಿತ್​...

ಪರೇಶ್‌ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್‌ ಸಲ್ಲಿಸಿದ್ರೂ ತಪ್ಪು ಅಂತಾರೆ: ಹಾಗಾದ್ರೆ ಗೃಹಸಚಿವ ಅಮಿತ್​ ಶಾ ಅವರೇ ಫೇಲ್​ ಅಲ್ವಾ? ಸಿದ್ದರಾಮಯ್ಯ

- Advertisement -
- Advertisement -

ರಾಯಚೂರು:  ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಕಮಿಷನ್ ಆರೋಪದ ಬಗ್ಗೆ ಪ್ರಧಾನಿ ತನಿಖೆ ಮಾಡಿಸಬೇಕಿತ್ತು. ನ್ಯಾಯಾಂಗ ತನಿಖೆ ಮಾಡಿ ಅಂದರೆ ದಾಖಲೆ ಕೇಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಒಂದು ಆರೋಪ ಬಂದರೆ ಪ್ರಕರಣವನ್ನು ಸಿಬಿಐಗೆ ಕೊಡುತ್ತಿದ್ವಿ. ಮೋದಿ ಪ್ರಧಾನಿ ಆಗಿದ್ದಾಗಲೂ ಎಷ್ಟೋ ಕೇಸ್​ಗಳನ್ನು​ ಸಿಬಿಐಗೆ ಕೊಟ್ಟಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು ಪರೇಶ್ ಮೇಸ್ತ ಕೊಲೆ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ. ಆದರೂ ತಪ್ಪು ಅಂತ ಹೇಳುತ್ತಾರೆ. ಹಾಗಾದರೆ ಗೃಹಸಚಿವ ಅಮಿತ್​ ಶಾ ಅವರೇ ಫೇಲ್​ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಆತ್ಮಹತ್ಯೆ ಪ್ರಕರಣಗಳನ್ನು ಕೊಲೆ ಎಂದು ಬಿಂಬಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement -

Latest News

error: Content is protected !!