Wednesday, June 3, 2026
Homeಕರಾವಳಿಉಡುಪಿಉಡುಪಿ :ಭಕ್ತರ ಸೋಗಿನಲ್ಲಿ ಬಂದು ಕದಿಯಲು ಯತ್ನಿಸುತ್ತಿದ್ದ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಡುಪಿ :ಭಕ್ತರ ಸೋಗಿನಲ್ಲಿ ಬಂದು ಕದಿಯಲು ಯತ್ನಿಸುತ್ತಿದ್ದ ಕಳ್ಳಿಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

- Advertisement -
- Advertisement -

ಉಡುಪಿ: ಭಕ್ತರ ಸೋಗಿನಲ್ಲಿ ದೇವಸ್ಥಾನಕ್ಕೆ ಬಂದು ಭಕ್ತರ ಚಿನ್ನದ ಸರ ಕದಿಯಲು ಯತ್ನಿಸುತ್ತಿದ್ದ ಕಳ್ಳಿಯರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ನಡೆದಿದೆ.


ತಮಿಳುನಾಡು ಮೂಲದ ಗಾಯತ್ರಿ ಹಾಗೂ ಕಾಳಿ ಬಂಧಿತ ಕಳ್ಳಿಯರು. ಇವರು ಕೋಟ ಅಮೃತೇಶ್ವರಿ ದೇಗುಲಕ್ಕೆ ಭಕ್ತರಂತೆ ಆಗಮಿಸಿದ ಕಳ್ಳಿಯರು ಭಕ್ತರೊಬ್ಬರ ಕೊರಳಿನಲ್ಲಿ ಇದ್ದ ಚಿನ್ನ ಸರಕ್ಕೆ ಕೈ ಹಾಕುವ ವೇಳೆ ಗಮನಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!