Friday, May 3, 2024
Homeತಾಜಾ ಸುದ್ದಿಭಾರತ್ ಜೋಡೋ ಯಾತ್ರೆಯ ವೇಳೆ ತಾಯಿಯ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ: ಪಕ್ಷ ಬೇಧ...

ಭಾರತ್ ಜೋಡೋ ಯಾತ್ರೆಯ ವೇಳೆ ತಾಯಿಯ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿ: ಪಕ್ಷ ಬೇಧ ಮರೆತು ಯುವರಾಜನ ಮಾತೃ ವ್ಯಾತ್ಸಲ್ಯಕ್ಕೆ ಫಿದಾ ಆದ ನೆಟ್ಟಿಗರು

spot_img
- Advertisement -
- Advertisement -

ನವದೆಹಲಿ: ಇಂದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆದ ಫೋಟೋ ಅಂದ್ರೆ ಅದು ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಗಾಂಧಿ ಅವರ ಶೂ ಲೆಸ್ ಕಟ್ಟುತ್ತಿರುವ ಫೋಟೋ.

ಅಂದ್ಹಾಗೆ ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಅವರು ತಮ್ಮ ತಾಯಿಯ ಶೂ ಲೇಸ್ ಕಟ್ಟಿದ್ದಾರೆ.

ಈ ಕುರಿತಾದ ಫೋಟೋ ಹಾಗೂ ವಿಡಿಯೋಯನ್ನು ಅನೇಕ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ನೆಲದ ಮೇಲೆ ಮಂಡಿಯೂರಿ ತಾಯಿ ಸೋನಿಯಾ ಗಾಂಧಿಯವರ ಶೂ ಲೇಸ್ ಅನ್ನು ಕಟ್ಟಲು ಸಹಾಯ ಮಾಡಿರುವುದನ್ನು ನೋಡಬಹುದು. ಇದಾಗ ಬಳಿಕ ಮೆರವಣಿಗೆ ಮುಂದುವರೆಯಿತು.

ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಸೋನಿಯಾ ಗಾಂಧಿಯವರ ಮೊದಲ ಸಾರ್ವಜನಿಕ ಪ್ರವಾಸ ಇದಾಗಿದೆ. ಅವರು ಕೊನೆಯದಾಗಿ 2016 ರಲ್ಲಿ ವಾರಣಾಸಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.

ರಾಹುಲ್ ಗಾಂಧಿ ಅವರ ತಾಯಿ ಪ್ರೀತಿಗೆ ಕೇವಲ ಕಾಂಗ್ರೆಸ್ಸಿಗರು ಮಾತ್ರವಲ್ಲದೇ ಇತರೆ ಪಕ್ಷದವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!