Sunday, June 7, 2026
Homeಕರಾವಳಿಕಟೀಲು ಮೇಳದಲ್ಲಿದ್ದ ಸುಳ್ಯದ ಪ್ರಸಿದ್ಧ ಕಲಾವಿದ ಜಾಂಡೀಸ್ ಗೆ ಬಲಿ

ಕಟೀಲು ಮೇಳದಲ್ಲಿದ್ದ ಸುಳ್ಯದ ಪ್ರಸಿದ್ಧ ಕಲಾವಿದ ಜಾಂಡೀಸ್ ಗೆ ಬಲಿ

- Advertisement -
- Advertisement -

ಸುಳ್ಯ: ಕಟೀಲು ಮೇಳದಲ್ಲಿದ್ದ ಸುಳ್ಯ ತಾಲೂಕಿನ   ಮರ್ಕಂಜ ಗ್ರಾಮದ ಕುದ್ಕುಳಿಯ , ಸದ್ಯ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನೆಲೆಸಿರುವ ದಿ| ಮೋಂಟಪ್ಪ ಗೌಡ ಕುದ್ಕುಳಿಯವರ ಪುತ್ರ ಚಿದಾನಂದ (28 ) ಜಾಂಡೀಸ್ ಗೆ ಬಲಿಯಾಗಿದ್ದಾರೆ.

ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜರವರ ಮಾರ್ಗದರ್ಶನದಲ್ಲಿ ಮದ್ದಳೆ ಕಲಿತು ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಮೇಳದಲ್ಲಿ ಭಾಗವತರಾಗಿ, ನಾಟ್ಯ ಕಲಾವಿದರಾಗಯೂ ತೊಡಗಿಕೊಂಡಿದ್ದರು. ನಂತರ   ಅವರು ಮದ್ದಳೆಯಲ್ಲಿ ಹೆಸರುವಾಸಿಯಾಗಿದ್ದರು.  ಸತೀಶ್ ಶೆಟ್ಟಿ ಪಟ್ಲರವರಂತಹ ಪ್ರಸಿದ್ಧ ಭಾಗವತರಿಗೆ ಹಿಮ್ಮೇಳದಲ್ಲಿ ಮದ್ದಳೆಯಲ್ಲಿ ಸಾಥ್ ನೀಡುತ್ತಿದ್ದರು.

ಇವರು ಸುಮಾರು 15 ವರ್ಷಗಳಿಂದಲೂ ಹೆಚ್ಚು ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.  ಕಳೆದ ಕೆಲವು ದಿನಗಳಿಂದ ಜಾಂಡೀಸ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!