Sunday, June 7, 2026
Homeಕರಾವಳಿಬಂಟ್ವಾಳ: ಚಿಕನ್ ಟಿಕ್ಕಾ ಪಾರ್ಸೆಲ್‌ ಕೊಳ್ಳಲು ಬಂದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

ಬಂಟ್ವಾಳ: ಚಿಕನ್ ಟಿಕ್ಕಾ ಪಾರ್ಸೆಲ್‌ ಕೊಳ್ಳಲು ಬಂದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

- Advertisement -
- Advertisement -

ಬಂಟ್ವಾಳ: ಚಿಕನ್ ಟಿಕ್ಕಾ ಪಾರ್ಸೆಲ್‌ ಕೊಳ್ಳಲು ಬಂದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ‌ ಬೆಳಕಿಗೆ ಬಂದಿದೆ.

ಕಲ್ಲಡ್ಕ-ವಿಟ್ಲ ರಸ್ತೆಯಲ್ಲಿರುವ ಟಿಕ್ಕಾ ಪಾಯಿಂಟ್ ಗೆ ಅಪ್ರಾಪ್ತ ಬಾಲಕ 8 ಗಂಟೆ ಸುಮಾರಿಗೆ ಟಿಕ್ಕಾ‌ ಪಾರ್ಸೆಲ್ ಕೊಳ್ಳಲು ಬಂದಿದ್ದಾನೆ‌. ಆ‌ ವೇಳೆ‌ ಬಾಲಕನಲ್ಲಿ ಅಂಗಡಿ ಒಳಗಿಂದ ಪಾರ್ಸೆಲ್ ಗೆ ಪ್ಲ್ಯಾಸ್ಟಿಕ್ ಕವರ್ ತೆಗೆದುಕೊಳ್ಳುವಂತೆ ಅಂಗಡಿ ಮಾಲೀಕ ಮಹಮ್ಮದ್ ಅಶ್ರಫ್ ಕರೆದಿದ್ದಾನೆ. ಬಾಲಕ ಒಳಗೆ ಬರುತ್ತಿದ್ದಂತೆ ಆರೋಪಿ ಅಂಗಡಿ ಮಾಲೀಕ ಅಶ್ರಫ್ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ.

ಈ ಘಟನೆಯ ಕೆಲವು ದಿನಗಳ‌ ಬಳಿಕ ಬಾಲಕ ಕಲ್ಲಡ್ಕ ಪೇಟೆಗೆ ಹಾಲು ತರಲೆಂದು ಅಂಗಡಿಗೆ ಹೋಗಿ ವಾಪಾಸ್ಸಾಗುವಾಗ ಎದುರಿನಿಂದ ಬಂದ ಆರೋಪಿ ಈತನನ್ನು ಬರುವಂತೆ ಒತ್ತಾಯಿಸಿದ್ದಾನೆ. ನಾನು ಬರುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.ಬಾಲಕ ತಪ್ಪಿಸಿಕೊಂಡು ಮನೆಗೆ ಹೋಗಿ ಪೋಷಕರಿಗೆ ವಿಚಾರ ತಿಳಿಸಿದ್ದಾನೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!