Friday, May 17, 2024
Homeತಾಜಾ ಸುದ್ದಿ15 ವರ್ಷಕ್ಕೆ 75 ವರ್ಷದ ವೃದ್ಧನ ಪ್ರೀತಿಯಲ್ಲಿ ಬಿದ್ದ ಯುವತಿ; 3 ವರ್ಷ ಪ್ರೀತಿಸಿ 18...

15 ವರ್ಷಕ್ಕೆ 75 ವರ್ಷದ ವೃದ್ಧನ ಪ್ರೀತಿಯಲ್ಲಿ ಬಿದ್ದ ಯುವತಿ; 3 ವರ್ಷ ಪ್ರೀತಿಸಿ 18 ವರ್ಷಕ್ಕೆ ತಾತನ ಜೊತೆ ವಿವಾಹ

spot_img
- Advertisement -
- Advertisement -

ನ್ಯೂಸ್ ಡೆಸ್ಕ್ ; ಪ್ರೀತಿ ಕರುಡು ಅನ್ನೋ ಮಾತು ಒಮ್ಮೊಮ್ಮೆ ನಿಜ ಅನ್ಸುತ್ತೆ. ಅದಕ್ಕೆ ಕಾರಣ ನಮ್ಮ ಮುಂದೆ ನಡೆಯೋ ಕೆಲವು ಘಟನೆಗಳು. ಕೆಲವೊಂದು ಘಟನೆಗಳನ್ನು ನೋಡಿದ್ರೆ ಜನ ಹೀಗೆಲ್ಲಾ ಪ್ರೀತಿ ಮಾಡ್ತಾರಾ ಅಂತಾ ಅನ್ಸುತ್ತೆ. ನಿಜಕ್ಕೂ ನಿಮಗೆ ಈ ಸ್ಟೋರಿಯನ್ನು ನೋಡಿದ್ರೆ ಹಾಗೇ ಅನ್ನಿಸದೇ ಇರದು.

ಇದು ತಾತನ ವಯಸ್ಸಿನ ವೃದ್ಧನನ್ನು 18ರ ಯುವತಿ ವಿವಾಹವಾದ ರಿಯಲ್ ಪ್ರೇಮ ಕಹಾನಿ. ಅಂದ್ಹಾಗೆ ಈ ಸುಂದರ ಪ್ರೇಮ ಕಥೆ ನಡೆದದ್ದು ಫಿಲಿಫೈನ್ಸ್ ನಲ್ಲಿ. ಫಿಲಿಪೈನ್ಸ್ ನಿವಾಸಿಯಾಗಿರುವ ರಶಾದ್ ಮತ್ತು ಹಲೀಮಾ ಜೋಡಿ ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದ ಒಂದು ಡಿನ್ನರ್ ಪಾರ್ಟಿಯಲ್ಲಿ ಮೊದಲು ಭೇಟಿಯಾಗಿದ್ರು. ಆಗಿನ್ನು ಹಲೀಮಾಗೆ 15 ವರ್ಷ. ರಶಾದ್ ಗೆ 75 ವರ್ಷ.ಅಲ್ಲಿಂದ ಗಾಢವಾದ ಪ್ರೀತಿಯಲ್ಲಿ ಬಿದ್ದ ಅವರಿಬ್ಬರು ಮೂರು ವರ್ಷದ ಬಳಿಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಹಲೀಮಾಗೆ 18 ವರ್ಷ. ರಶಾದ್ ಗೆ 78 ವರ್ಷ.

ಇಬ್ಬರೂ ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ ಒಪ್ಪಿಕೊಂಡಿವೆ. ಸದ್ಯ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಇಂಟರೆಸ್ಟಿಂಗ್ ವಿಚಾರ  ಅಂದ್ರೆ ಅಜ್ಜನಿಗೆ ವಯಸ್ಸು 78 ಆದ್ರೂ ಇದೇ ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್‌ ಲವ್‌ ಮತ್ತು ಫಸ್ಟ್‌ ಹೆಂಡತಿ ಎನ್ನುವುದು ವಿಶೇಷ. ಇಬ್ಬರ ಪ್ರೀತಿ ಹೀಗೆ ಇರಲಿ ಎಂದು ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

 

- Advertisement -
spot_img

Latest News

error: Content is protected !!