Thursday, June 4, 2026
Homeಕರಾವಳಿಉಡುಪಿಬಂಟ್ವಾಳದಲ್ಲಿ ಕಂಡುಬಂದ ಪಿಎಫ್ಐ ರಸ್ತೆ ಬರಹ ಒಂದು ಎಚ್ಚರಿಕೆ: ಉಡುಪಿಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್...

ಬಂಟ್ವಾಳದಲ್ಲಿ ಕಂಡುಬಂದ ಪಿಎಫ್ಐ ರಸ್ತೆ ಬರಹ ಒಂದು ಎಚ್ಚರಿಕೆ: ಉಡುಪಿಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ

- Advertisement -
- Advertisement -

ಉಡುಪಿ: ಬಂಟ್ವಾಳ ತಾಲೂಕಿನಲ್ಲಿ ಕಂಡು ಬಂದ ಪಿಎಫ್ ಐ ರಸ್ತೆ ಬರಹ ಒಂದು ಎಚ್ಚರಿಕೆಯಾಗಿದ್ದು
ಪಿಎಫ್ಐ ಇನ್ನೂ ಆಕ್ಟಿವ್ ಆಗಿದೆ ಎಂಬುದರ ಸಂಕೇತ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್ಐ ಬ್ಯಾನ್, ಬಂಧನದಿಂದ ಅವರ ಆಟ ಮುಗಿಯುವುದಿಲ್ಲ, ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದ್ದಾರೆ.

ಪಿಎಫ್ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ ಎಂದು ಹೇಳಿರುವ ಮುತಾಲಿಕ್, ಕುತಂತ್ರ, ಷಡ್ಯಂತ್ರ, ದೇಶದ್ರೋಹಿ ಪ್ರವೃತ್ತಿ ಬ್ಯಾನ್ ನಿಂದ ತಡೆಯಲು ಸಾಧ್ಯವಿಲ್ಲ, ಪಿಎಫ್ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ. ಪಿಎಫ್ ಐ ನಿಷೇಧಿಸಲ್ಪಟ್ಟ ಬಳಿಕ ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ ಎಂಬ ಬರಹ ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡಿತ್ತು

- Advertisement -

Latest News

error: Content is protected !!