Saturday, June 6, 2026
HomeUncategorizedಮನೆಯಲ್ಲಿ ವಿಜಯದಶಮಿ ದಿನ ಹುಲಿವೇಷ ವೀಕ್ಷಿಸಿದ ಗೃಹ ಸಚಿವ

ಮನೆಯಲ್ಲಿ ವಿಜಯದಶಮಿ ದಿನ ಹುಲಿವೇಷ ವೀಕ್ಷಿಸಿದ ಗೃಹ ಸಚಿವ

- Advertisement -
- Advertisement -

ಶಿವಮೊಗ್ಗ: ವಿಜಯದಶಮಿ ದಿನವಾದ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹುಲಿವೇಷ ವೀಕ್ಷಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ನಿವಾಸದಲ್ಲಿ ದಸರಾ ಅಂಗವಾಗಿ ಹುಲಿವೇಷ ವೀಕ್ಷಿಸಿದರು.

ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ತಮ್ಮ ಕ್ಷೇತ್ರದಲ್ಲಿರುವ ಖಾಸಗಿ ನಿವಾಸದಲ್ಲೇ ರಜಾ ದಿನವನ್ನು ಗೃಹ ಸಚಿವರು ಕಳೆದಿದ್ದಾರೆ.

ನಿನ್ನೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರ ಜೊತೆ ಆಯುಧ ಪೂಜೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!