Saturday, June 6, 2026
Homeಕರಾವಳಿಕುಟುಂಬದವರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ 9 ವರ್ಷದ ಬಾಲಕ ಹೃದಯಾಘಾತದಿಂದ ಸಾವು

ಕುಟುಂಬದವರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ 9 ವರ್ಷದ ಬಾಲಕ ಹೃದಯಾಘಾತದಿಂದ ಸಾವು

- Advertisement -
- Advertisement -

ಕೇರಳ:ತನ್ನ ತಾಯಿ ಮತ್ತು ಒಡಹುಟ್ಟಿದವರ ಜೊತೆ ಕೇರಳದಿಂದ ಉಮ್ರಾ ಯಾತ್ರೆಗ ತೆರಳಿದ್ದ ಬಾಲಕನೊಬ್ಬ ಮೆಕ್ಕಾದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ..

ಕೋಝಿಕ್ಕೋಡ್ ಮುಕ್ಕಂ ಕಾರಸ್ಸೆರಿ ಕಕ್ಕಡ್ ನಿವಾಸಿ, ಚಕ್ಕಿಪರಂಬನ್ ಕುರಂಗನಂ ನಿವಾಸಿ ನಾಸರ್ ಮತ್ತು ಖದೀಜಾ ದಂಪತಿಯ ಪುತ್ರ ಅಬ್ದುಲ್ ರಹಮಾನ್ (9) ಮೃತ ಬಾಲಕ .ಅಬ್ದುಲ್ ರೆಹ್ಮಾನ್ ತನ್ನ ತಾಯಿ, ಸಹೋದರ ಮತ್ತು ಸಹೋದರಿಯೊಂದಿಗೆ ಉಮ್ರಾ ಮಾಡಲು ತೆರಳಿದ್ದ. ಬಾಲಕನ ತಂದೆ ಮೆಕ್ಕಾದಲ್ಲಿದ್ದರು.

ಸೋಮವಾರ ಉಮ್ರಾ ಮುಗಿಸಿ ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಮಗ್ರಿಬ್ ನಮಾಜಿಗಾಗಿ ಮಸೀದಿ ಅಲ್-ಹರಾಮ್‌ಗೆ ತೆರಳುತ್ತಿದ್ದಾಗ ಕುಸಿದು ಬಿದ್ದಿದ್ದಾನೆ.ಮಗುವನ್ನು ತಕ್ಷಣವೇ ಮಕ್ಕಾ ಕಿಂಗ್ ಅಬ್ದುಲಜೀಜ್ ಆಸ್ಪತ್ರೆಗೆ ಮತ್ತು ನಂತರ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಆದರೆ ಅಷ್ಟರಲ್ಲಿ ಅವನು ಸಾವನ್ನ್ಪಪಿದ್ದಾನೆ.  ಮೃತ ದೇಹವನ್ನು ಮೆಕ್ಕಾದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿದೆ.

- Advertisement -

Latest News

error: Content is protected !!