Saturday, May 25, 2024
Homeಕರಾವಳಿಸುಳ್ಯ : ಬಿಜೆಪಿ‌ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: NIA ಜೊತೆಗೆ ತನಿಖೆಗೆ 9...

ಸುಳ್ಯ : ಬಿಜೆಪಿ‌ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: NIA ಜೊತೆಗೆ ತನಿಖೆಗೆ 9 ಮಂದಿ ದಕ್ಷ ಪೊಲೀಸರು ನೇಮಕ: 9 ಮಂದಿ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ

spot_img
- Advertisement -
- Advertisement -

ಸುಳ್ಯ : ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಹತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಕೈಗೆತ್ತಿಕೊಂಡಿದೆ.

ಎನ್.ಐ.ಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಓಓಡಿ ಮೂಲಕ ಬೆಂಗಳೂರು ಎನ್.ಐ.ಎ ವಿಭಾಗದ ಅಧಿಕಾರಿಗಳ‌ ಜೊತೆ ಪ್ರಕರಣ ಭೇದಿಸಲು ಪ್ರಮುಖ ದಕ್ಷ ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ಡಾ.ಎಮ್.ಎ.ಸಲೀಂ ಐಪಿಸ್ ಅವರು ಬುಧವಾರ ಆದೇಶ ಹೊರಡಿಸಿದ್ದು ತಕ್ಷಣ ಎನ್.ಐ.ಎ ಬೆಂಗಳೂರು ಕಛೇರಿಗೆ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ.

ಎನ್.ಐ.ಎ ಗೆ 9 ಮಂದಿ ಪೊಲೀಸರು ನೇಮಕ

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ , ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಉದಯ ರವಿ, ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಉದಯ ರೈ , ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅನಿಲ್ ತಂಡವನ್ನು ಒಂದು ತಿಂಗಳವರೆಗೆ ಎನ್.ಐ.ಎ ಗೆ ಓಓಡಿ ಮೂಲಕ ನೇಮಕವಾಗಿದ್ದಾರೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಮುಖಂಡ ಹಾಗೂ ಕೋಳಿ ಉದ್ಯಮ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರ. ಅವರನ್ನು ಜುಲೈ 27 ರಂದು ರಾತ್ರಿ ಸುಮಾರು 8:30 ರ ಸಮಯಕ್ಕೆ ಬೈಕ್ ನಲ್ಲಿ ಬಂದಿದ್ದ ಮೂವರು ಹಂತಕರು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಎಬ್ಬಿಸಿತ್ತು. ಅದಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಮಂತ್ರಿ ಆದಿಯಾಗಿ ಸಚಿವರು ಪ್ರವೀಣ್ ನೆಟ್ಟಾರು ಮನೆಗೆ ದೌಡಾಯಿಸಿ ಸ್ವಾಂತನ ಹೇಳಿದ್ದರು. ಈ ವೇಳೆ ಮನೆ ಮಂದಿ ಹಾಗೂ ಬಿಜೆಪಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ‌ ದಳ (NIA) ನೀಡಿತ್ತು. ಹತ್ಯೆಗೆ ಸಂಬಂಧಿಸಿದಂತೆ ಸಹಕರಿಸಿದ 7 ಜನರನ್ನು ಪೊಲೀಸರು ಬಂಧಿಸಿದ್ದರು. ಆದ್ರೆ 16 ದಿನದ ಬಳಿಕ ಪ್ರಮುಖ ಮೂವರು ಬಂಧನವಾಗಿತ್ತು.ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಆಗಸ್ಟ್ 4 ರಂದು ಎಫ್ಐಆರ್ ದಾಖಲಿಸಿ ಬೆಳ್ಳಾರೆಗೆ ಅಗಮಿಸಿ ಇದೀಗ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!