Friday, June 26, 2026
Homeಉತ್ತರ ಕನ್ನಡಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಇನ್ನು 9 ಶವಗಳು ಬಾಕಿ; ಉಡುಪಿಯ ದ್ವಾರಕಾಮಯಿ ಮಠದ ಸಾಯಿ...

ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಇನ್ನು 9 ಶವಗಳು ಬಾಕಿ; ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಸ್ವಾಮೀಜಿ ಭವಿಷ್ಯ

- Advertisement -
- Advertisement -

ಅಂಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಸ್ವಾಮೀಜಿ ಭೇಟಿ ನೀಡಿದ್ದು,‌ ದುರಂತ ಸ್ಥಳದಲ್ಲಿ ಇನ್ನೂ 9 ಶವಗಳು ಇವೆ ಎಂದು ಭವಿಷ್ಯ ನುಡಿದಿದ್ದಾರೆ.

ಪೆಂಡ್ಯುಲಮ್ ಮತ್ತು ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ಮೂಲಕ ಪತ್ತೆ ಕಾರ್ಯ ನಡೆಸಿದ್ದು, ಸ್ವಾಮೀಜಿ ಪ್ರಕಾರ ಸ್ಥಳದಲ್ಲಿ ಇನ್ನೂ ಒಂಬತ್ತು ದೇಹಗಳು ಪತ್ತೆಯಾಗಲು ಬಾಕಿ ಇವೆ.

ಇದೇ ವೇಳೆ ನಾಪತ್ತೆಯಾಗಿರುವ ಕೇರಳ ಮೂಲದ ಟ್ರಕ್ ಗಂಗಾವಳಿ ನದಿಯಲ್ಲಿ 24 ಅಡಿ ಆಳದಲ್ಲಿ ಇದೆ ಎಂದಿರುವ ಸ್ವಾಮೀಜಿ, ಟ್ರಕ್ ಬಿದ್ದಿರುವ ಜಾಗದ ಬಳಿ ಒಂದು ದೇಹ ಇದೆ ಎಂದೂ ತಿಳಿಸಿದ್ದಾರೆ.

ಈಗಾಗಲೇ ನದಿಯಿಂದ ಎಂಟು ಶವಗಳನ್ನು ಮೇಲೆತ್ತಲಾಗಿದ್ದು, ಟ್ರಕ್ ಚಾಲಕ ಅರ್ಜುನ್ ಗಾಗಿ ಮಿಲಿಟರಿ, ಎನ್ ಡಿಆರ್ ಎಫ್, ಸ್ಕೂಬಾ ಡೈವಿಂಗ್ ಮೂಲಕ ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಈವರೆಗೆ ಸಫಲವಾಗಿಲ್ಲ.

- Advertisement -

Latest News

error: Content is protected !!