Sunday, June 7, 2026
Homeತಾಜಾ ಸುದ್ದಿ35 ವರ್ಷದ ಯುವಕನನ್ನು ಮದುವೆಯಾದ 81 ರ ವೃದ್ಧೆ: ವಿವಾಹವಾದ ಬಳಿಕ ಅಜ್ಜಿಗೆ ಕಾಡುತ್ತಿದೆ ಹೊಸ...

35 ವರ್ಷದ ಯುವಕನನ್ನು ಮದುವೆಯಾದ 81 ರ ವೃದ್ಧೆ: ವಿವಾಹವಾದ ಬಳಿಕ ಅಜ್ಜಿಗೆ ಕಾಡುತ್ತಿದೆ ಹೊಸ ಸಮಸ್ಯೆ

- Advertisement -
- Advertisement -

ಬ್ರಿಟನ್:  35 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾದ 81 ವರ್ಷದ ವೃದ್ಧೆಯೊಬ್ಬರು ಇದೀಗ ಸಮಸ್ಯೆಯೊಂದನ್ನು ಅನುಭವಿಸುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಅಂದ್ಹಾಗೆ ಆ ವೃದ್ಧೆಯ ಹೆಸರು ಐರಿಸ್ ಜಾನ್ ಬ್ರಿಟನ್ ಮೂಲದವರು. ಆಕೆ ಈಜಿಪ್ಟ್ ಮೂಲದ ಹುಡುಗನನ್ನು ಮದುವೆಯಾಗಿದ್ದಾರೆ. ತನಗಿಂತ 46 ವರ್ಷ ಚಿಕ್ಕವನಿರುವ ಅಹಮದ್ ಇಬ್ರಾಹಿಂನನ್ನು ಆಕೆ ಕಳೆದ ವರ್ಷ ಫೇಸ್ಬುಕ್ ಮೂಲಕ ಭೇಟಿಯಾಗಿದ್ದರು. ಇಬ್ಬರ ಮಧ್ಯೆ ಸ್ನೇಹ ಚಿಗುರಿ ಇಬ್ಬರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು.

ಈಗ ಆಕೆ ಪತಿ ಈಜಿಪ್ಟ್ ನಲ್ಲಿದ್ದಾನೆ. ಆಕೆ ಬ್ರಿಟನ್ ನಲ್ಲಿದ್ದಾರೆ. ಇದು ಆಕೆಯ ಬೇಸರಕ್ಕೆ ಕಾರಣವಾಗಿದೆ. ನಾನು ಮೂರು ಬಾರಿ ಈಜಿಪ್ಟ್ ಗೆ ಭೇಟಿ ನೀಡಿದ್ದೆ. ಅಲ್ಲಿಯ ವಾತಾವರಣ ನನಗೆ ಆಗುವುದಿಲ್ಲ. ಹಾಗಾಗಿ ಬ್ರಿಟನ್ ಗೆ ವಾಪಸ್ ಬಂದಿದ್ದೇನೆ. ಸಾವು ಹತ್ತಿರವಾಗ್ತಿದೆ. ಪ್ರತಿ ದಿನವೂ ನನಗೆ ಮಹತ್ವದ್ದು ಎಂದು ಐರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಹಮದ್ ಗೆ ಬ್ರಿಟನ್ ವೀಸಾ ಸಿಕ್ತಿಲ್ಲ. ಇದ್ರಿಂದ ಅಹಮದ್ ಬ್ರಿಟನ್ ಗೆ ಬರಲು ಸಾಧ್ಯವಾಗ್ತಿಲ್ಲ. ಪತಿಯನ್ನು ಭೇಟಿಯಾಗದೆ ನಾನು ಸಾವನ್ನಪ್ಪಿದ್ರೆ ಎಂಬ ದುಃಖ ಐರಿಸ್ ಗಿದೆ. ಬ್ರಿಟನ್ ಪ್ರಧಾನಿಗೆ ಐರಿಸ್ ಪತ್ರ ಬರೆದಿದ್ದು, ವೀಸಾ ನೀಡುವಂತೆ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!