Saturday, May 18, 2024
Homeಕರಾವಳಿಉಡುಪಿಉಡುಪಿಯ ವಡ್ಡರ್ಸೆಯಲ್ಲಿ ಗೊರಿಲ್ಲಾ ಓಡಾಟದ ವದಂತಿ: ಆತಂಕದಲ್ಲಿ ದಿನ ದೂಡುತ್ತಿದ್ದಾರೆ ಜನ

ಉಡುಪಿಯ ವಡ್ಡರ್ಸೆಯಲ್ಲಿ ಗೊರಿಲ್ಲಾ ಓಡಾಟದ ವದಂತಿ: ಆತಂಕದಲ್ಲಿ ದಿನ ದೂಡುತ್ತಿದ್ದಾರೆ ಜನ

spot_img
- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆ ಕೋಟ ಸಮೀಪದ ವಡ್ಡರ್ಸೆ ಗ್ರಾಮದ ಜನ ಸದ್ಯ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಅದಕ್ಕೆ ಕಾರಣ  ಗ್ರಾಮದಲ್ಲಿ ಗೊರಿಲ್ಲಾ ಇದೆ ಅನ್ನೋ ಸುದ್ದಿ.

ಈ ಭಾಗದ ಅರಣ್ಯ ಪ್ರದೇಶದಲ್ಲಿ ಗೋರಿಲ್ಲಾವನ್ನು ಕಂಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಭಾರೀ ಗಾತ್ರದ ಗೊರಿಲ್ಲಾ ಕಾಣಿಸಿಕೊಂಡಿದೆಯಂತೆ. ಸ್ಥಳೀಯರೊಬ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದಾಗ ಗೊರಿಲ್ಲಾ ಮಾಯವಾಗಿತ್ತು.

ಎಂಟು ಎಕರೆ ಪ್ರದೇಶದ ಈ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ನಂತರ ಗೊರಿಲ್ಲಾ ಪತ್ತೆಯಾಗಿಲ್ಲ. ಪಕ್ಕದಲ್ಲೇ ದಟ್ಟ ಅರಣ್ಯ ಪ್ರದೇಶವೂ ಇರುವುದರಿಂದ ಜನರ ಆತಂಕ ಹೆಚ್ಚಿಸಿದೆ. ಆದರೆ ಈ ಭಾಗದಲ್ಲಿ ಈವರೆಗೆ ಯಾರೂ ಗೊರಿಲ್ಲಾವನ್ನು ಕಂಡಿರಲಿಲ್ಲ. ಮರದ ಮರೆಯಲ್ಲಿ ನಿಂತ ಭಾರೀ ಗಾತ್ರದ ಗೊರಿಲ್ಲದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಗೊರಿಲ್ಲ ಕಾಣಿಸಿಕೊಳ್ಳುವ ಸಾಧ್ಯತೆ ಇರದ ಕಾರಣ ಇದೇನಾದರೂ ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯಾಗಬೇಕಿದೆ.

- Advertisement -
spot_img

Latest News

error: Content is protected !!