Thursday, July 16, 2026
Homeಕರಾವಳಿಕಾರ್ಕಳದ ನಾರಾವಿಯಲ್ಲಿ ದಿನಸಿ ಅಂಗಡಿಗೆ ನುಗ್ಗಿದ ಪೊಲೀಸ್ ವಾಹನ: ಅಂಗಡಿಯಲ್ಲಿದ್ದ ಮಹಿಳೆಗೆ ಗಾಯ

ಕಾರ್ಕಳದ ನಾರಾವಿಯಲ್ಲಿ ದಿನಸಿ ಅಂಗಡಿಗೆ ನುಗ್ಗಿದ ಪೊಲೀಸ್ ವಾಹನ: ಅಂಗಡಿಯಲ್ಲಿದ್ದ ಮಹಿಳೆಗೆ ಗಾಯ

- Advertisement -
- Advertisement -

ಕಾರ್ಕಳ: ನಿಯಂತ್ರಣ ತಪ್ಪಿದ ಪೊಲೀಸ್ ವಾಹನವೊಂದು ದಿನಸಿ ಅಂಗಡಿಗೆ ನುಗ್ಗಿದ ಘಟನೆ ಇಲ್ಲಿನ ನಾರಾವಿ ಕೆಳಗಿನ ಪೇಟೆ ಸಮೀಪ ನಡೆದಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಕಾರ್ಕಳ ಅರಕ್ಷಕ ಠಾಣೆಯ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ನಾರಾವಿ ಕೆಳಗಿನ ಪೇಟೆಯ ರಮೇಶ್ ಎಂಬವರ ಮಾಲೀಕತ್ವದ ದಿನಸಿ ಅಂಗಡಿಗೆ ನುಗ್ಗಿದೆ. ಪರಿಣಾಮ ಅಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಅಂಗಡಿ ಮಾಲೀಕ ರಮೇಶ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ವಾಹನ ಗುದ್ದಿದ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳಿಗೆಲ್ಲಾ ಹಾನಿಯಾಗಿದೆ.

- Advertisement -

Latest News

error: Content is protected !!