Thursday, June 4, 2026
Homeತಾಜಾ ಸುದ್ದಿಕುಮಾರರಾಮನ ಕೋಟೆಯಲ್ಲಿ 800 ವರ್ಷಗಳ ಹಿಂದಿನ ಕಲ್ಲಿನ ಫಿರಂಗಿ ಗುಂಡುಗಳು ಪತ್ತೆ

ಕುಮಾರರಾಮನ ಕೋಟೆಯಲ್ಲಿ 800 ವರ್ಷಗಳ ಹಿಂದಿನ ಕಲ್ಲಿನ ಫಿರಂಗಿ ಗುಂಡುಗಳು ಪತ್ತೆ

- Advertisement -
- Advertisement -

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ 800 ವರ್ಷಗಳ ಹಿಂದೆ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ ಗುಂಡುಗಳು ಪತ್ತೆಯಾಗಿವೆ.‌ ಕಂಪ್ಲಿ ತಾಲೂಕಿ‌ನ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ 39 ಕಲ್ಲಿನ ಫಿರಂಗಿ ಗುಂಡುಗಳು ಪತ್ತೆಯಾಗಿವೆ.

ಕೋಟೆ ಪ್ರವೇಶ ದ್ವಾರದ ಸಂರಕ್ಷಣಾ ಕಾಮಗಾರಿ ವೇಳೆ ಗುಂಡುಗಳು ಪತ್ತೆಯಾಗಿದ್ದು, ಕೋಟೆ ರಕ್ಷಣೆಯಲ್ಲಿ ಬಳಸುತ್ತಿದ್ದ ಸಣ್ಣ ಪ್ರಮಾಣದ ಕಲ್ಲಿನ ಫಿರಂಗಿ ಗುಂಡುಗಳಾಗಿವೆ. ಕಲ್ಲಿನ ಗುಂಡುಗಳು ಒಂದೇ ಕಡೆ ಮಣ್ಣಲ್ಲಿ ಹುದುಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರತಿ ಗುಂಡು 150 ಗ್ರಾಮ್ ತೂಕ ಇವೆ.‌

ಸದ್ಯ ಫಿರಂಗಿ ಗುಂಡುಗಳು ಪುರಾತತ್ವ ಸಂರಕ್ಷಣಾ ಇಲಾಖೆ ವಶದಲ್ಲಿವೆ.

- Advertisement -

Latest News

error: Content is protected !!