ಕೋವಿಡ್-19ನಿಂದ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70ರ ವೃದ್ಧೆ ಗುಣಮುಖವಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ 12 ಸೋಂಕಿತರಲ್ಲಿ 7 ಮಂದಿ ಗುಣಮುಖರಾಗಿದ್ದು, ಇನ್ನು 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೃದ್ಧೆಯು ಸೌದಿ ಅರೇಬಿಯಾದಿಂದ ಕೇರಳ ರಾಜ್ಯದ ಕಲ್ಲಿಕೋಟೆಗೆ ಮಾರ್ಚ್ 9ರಂದು ಬಂದಿದ್ದರು. ಆದರೆ ಆ ಬಳಿಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಮಾರ್ಚ್ 19ರಂದು ಅವರು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭ ಕೋವಿಡ್ ಶಂಕೆಯ ಮೇರೆಗೆ ವೃದ್ಧೆಯ ಗಂಟಲು ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ನಂತರ ಮಾರ್ಚ್ 24ರಂದು ವೃದ್ಧೆಗೆ ಕೋವಿಡ್-19 ಸೋಂಕು ಇರುವುದು ದೃಢಗೊಂಡಿತ್ತು.
ಬಳಿಕ ವೃದ್ಧೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ನಿಗಾ ಘಟಕದಲ್ಲಿ ಇರಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಆಕೆಯ ಗಂಟಲು ದ್ರವವನ್ನು ಎಪ್ರಿಲ್ 7 ಹಾಗೂ 8ರಂದು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ನೆಗೆಟಿವ್ ವರದಿ ದಾಖಲಾಗಿದೆ. ಆದ್ದರಿಂದ ವೃದ್ಧೆಯು ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಮಂಗಳೂರು: ಕೊರೊನಾ ವಿರುದ್ಧ ಜಯಿಸಿದ 70ರ ವೃದ್ಧೆ, ಆಸ್ಪತ್ರೆಯಿಂದ ಡಿಸ್ಚಾರ್ಜ್!
- Advertisement -
- Advertisement -
- Advertisement -