Friday, June 26, 2026
Homeಕರಾವಳಿಸುಳ್ಯ: ಇದ್ದಕ್ಕಿದ್ದಂತೆ 7ನೇ ತರಗತಿ ಬಾಲಕ ನಾಪತ್ತೆ; ಬೆಳಗ್ಗಿನ ಜಾವ ಪತ್ತೆ

ಸುಳ್ಯ: ಇದ್ದಕ್ಕಿದ್ದಂತೆ 7ನೇ ತರಗತಿ ಬಾಲಕ ನಾಪತ್ತೆ; ಬೆಳಗ್ಗಿನ ಜಾವ ಪತ್ತೆ

- Advertisement -
- Advertisement -

ಸುಳ್ಯ: ಇದ್ದಕ್ಕಿದ್ದಂತೆ 7ನೇ ತರಗತಿ ಬಾಲಕ ನಾಪತ್ತೆಯಾಗಿ ಬೆಳಗ್ಗಿನ ಜಾವ ಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದ ಶಾಂತಿಮಜಲಿನಲ್ಲಿ ನಡೆದಿದೆ.

ಅಡ್ಪಂಗಾಯ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನ್ವಿತ್ ಹಠಾತ್ ನಾಪತ್ತೆಯಾಗಿದ್ದ. ಈತನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಲಾಗಿತ್ತು. ಅಜ್ಜಾವರದ ಶಾಂತಿಮಜಲಿನ ಅನ್ವಿತ್ ಹುಡುಕಾಟಕ್ಕಾಗಿ ಪೋಷಕರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬುಧವಾರ (ಜ.22) ತಡರಾತ್ರಿ 3 ಗಂಟೆಗೆ ಅಜ್ಜಾವರದ ಭಜನಾ ಮಂದಿರ ಸಮೀಪದಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!