Wednesday, June 24, 2026
Homeಕರಾವಳಿಮಂಗಳೂರುಸುಬ್ರಮಣ್ಯ; ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು 6ನೇ ತರಗತಿ ಬಾಲಕನಿಗೆ ವ್ಯಕ್ತಿಯಿಂದ ಹಲ್ಲೆ; ವೀಡಿಯೋ ವೈರಲ್...

ಸುಬ್ರಮಣ್ಯ; ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು 6ನೇ ತರಗತಿ ಬಾಲಕನಿಗೆ ವ್ಯಕ್ತಿಯಿಂದ ಹಲ್ಲೆ; ವೀಡಿಯೋ ವೈರಲ್ ಆದ ಬೆನ್ನಲ್ಲೇ ತಾಯಿಯಿಂದ ದೂರು

- Advertisement -
- Advertisement -

ಸುಬ್ರಮಣ್ಯ; ಅಂಗಡಿಯಿಂದ ಹಣ ಕದ್ದಿದ್ದಾನೆ ಎಂದು ಅಪ್ರಾಪ್ತ ಬಾಲಕನಿಗೆ ವ್ಯಕ್ತಿ ಹಲ್ಲೆ ಮಾಡಿದ್ದು  ವೀಡಿಯೋ ವೈರಲ್ ಆದ ಬೆನ್ನಲ್ಲೇ  ಬಾಲಕನ ತಾಯಿ ದೂರು ದಾಖಲಿಸಿದ ಘಟನೆ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪಲ್ಲೋಡಿ ಎಂಬಲ್ಲಿ ನಡೆದಿದೆ.

ಪ್ರಕರಣದ ವಿವರ;

ಐವತ್ತೊಕು ಗ್ರಾಮದ ಪಲ್ಲೋಡಿ ನಿವಾಸಿಯಾಗಿರುವ ಸವಿತಾ ಅವರು ತನ್ನ ಎರಡು ಮಕ್ಕಳೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರ  ಮಗ ಪಲ್ಲೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದು ಆತನು ಸುಮಾರು 3 ವಾರಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ. ಅವನಿಗೆ ಶಾಲೆಗೆ ಹೋಗುವಂತೆ ಬುದ್ಧಿವಾದ ಹೇಳಿದರೂ ಆತನು ಶಾಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ  ಬಾಲಕನ ತಾಯಿ ಸವಿತಾ ತಮ್ಮ ಊರಿನ ಚೇತನ್ ಬೊಳ್ಳಲೆ ಎಂಬವರಲ್ಲಿ ಮಗ ನಾನು ಎಷ್ಟು ಹೇಳಿದರೂ ಶಾಲೆಗೆ ಹೋಗಲ್ಲ. ಆದ್ದರಿಂದ ತೇಜಸ್ ನಿಗೆ ಶಾಲೆಗೆ ಹೋಗುವಂತೆ ಬುದ್ಧಿವಾದ ಹೇಳುವಂತೆ ಹೇಳಿದ್ದಾರೆ. ನಂತರ ಚೇತನ್ ರವರು ಬಾಲಕನಿಗೆ ನೀನು ಯಾಕೆ ಶಾಲೆಗೆ ಹೋಗುವುದಿಲ್ಲ. ಅಬ್ಬಾಸ್ ನವರ ಅಂಗಡಿಯಿಂದ ಹಣ ಯಾಕೆ ಕದ್ದಿದ್ದು, ನಿನಗೆ ಶಾಲೆಗೆ ಹೋಗದೇ ಹಣ ಕದಿಯುವುದೇ ಕೆಲಸವ ಎಂದು ಜೋರು ಮಾಡಿ ಕೋಲು ಹಿಡಿದುಕೊಂಡು ಗದರಿಸುವ ವೀಡೀಯೋವೊಂದು ಮೊಬೈಲ್ ನಲ್ಲಿ ಹರಿದಾಡುತ್ತಿರುವುದನ್ನು ಸವಿತಾರವರು ಮೊಬೈಲ್ ನಲ್ಲಿ ನಿನ್ನೆ ನೋಡಿ ಬಳಿಕ ಮಗನಲ್ಲಿ ವಿಚಾರಿಸಿದಾಗ ಆತನು ತಾನು ಐವತ್ತೊಕ್ಲು ಗ್ರಾಮದ ಪಲ್ಲೋಡಿ ಅಬ್ಬಾಸ್ ಎಂಬವರ ಅಂಗಡಿಗೆ ದಿನಾಂಕ 24-11-2025 ರಂದು ಬೆಳಿಗ್ಗೆ ಸಮಯ ಸುಮಾರು 09-30 ಗಂಟೆಗೆ ಹೋದಾಗ ಅಲ್ಲಿ ಚೇತನ್ ರವರು ತನ್ನಲ್ಲಿ ನೀನು ಯಾಕೆ ಶಾಲೆಗೆ ಹೋಗುವುದಿಲ್ಲ. ಶಾಲೆಗೆ ಹೋಗದೇ ಕದಿಯವುದೇ ನಿನ್ನ ಕೆಲಸವಾ ಎಂದು ಗದರಿಸಿ ಅವರ ಕೈಯಲ್ಲಿದ್ದ ಕೋಲಿನಿಂದ ತನ್ನ ಕಾಲಿಗೆ ಹೊಡೆದಿರುವುದಾಗಿ ಆ ಸಮಯ ಅಲ್ಲಿ ನಮ್ಮ ಮನೆಯ ಪಕ್ಕದ ಚನಿಯ ಎಂಬವರು ಕೂಡಾ ಅಲ್ಲಿದ್ದರೆಂದು ತಿಳಿಸಿದ್ದಾನೆ. ಆದುದರಿಂದ ಸವಿತಾ ಅವರು ತಮ್ಮ ಮಗನಿಗೆ ಗದರಿಸಿ ಕೋಲಿನಿಂದ ಹೊಡೆದ ಚೇತನ್ ಬೊಳ್ಳಲೆ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!